ಕಾಸರಗೋಡು : ಕೇರಳವು ಅಸ್ಮಿತೆಯೆಡೆಗೆ ಎಂಬ ಸಂದೇಶದೊಂದಿಗೆ ಸನ್ಯಾಸಿವರ್ಯರ ನೇತೃತ ಕಾಸರಗೋಡಿನಿಂದ ತಿರುವನಂತಪುರದ ವರೆಗೆ ನಡೆಲಿರುವ "ಧರ್ಮ ಸಂದೇಶ ಯಾತ್ರೆಗೆ ಸಹಸ್ರ ಜನ ಹಿಂದೂ ಭಕ್ತರ ಸಹಭಾಗಿತ್ವದಲ್ಲಿ ಮಂಗಳವಾರ ಕಾಸರಗೋಡಿನಿಂದ ಚಾಲನೆ ನೀಡಲಾಯಿತು.
ಇಂದು ಅಪರಾಹ್ನ ಕರಂದಕ್ಕಾಡಿನಿಂದ ನೂರಾರು ಸನ್ಯಾಸಿವರ್ಯರು ವಾದ್ಯಘೋಷ ಗಳೊಂದಿಗೆ ತಾಳಿಪಡುಮೈದಾನ ವರೆಗೆ ಶೋಭಾ ಯಾತ್ರೆಯಲ್ಲಿ ಸಾಗಿ ಬಂದರು. ಬಳಿಕ ನಡೆದ ಧರ್ಮ ಸಂದೇಶ ಸಭೆಯನ್ನು ಕೊಳತ್ತೂರು ಅದ್ವೈತಾಶ್ರಮದ ಮಠಾಧೀಶರಾದ ಮಾರ್ಗದರ್ಶಕ ಮಂದಳಿಯ ಪ್ರಾಂತ್ಯ ಅಧ್ಯಕ್ಷ ಶ್ರೀ ಚಿದಾನಂದ ಪುರಿ ಸ್ವಾಮೀಜಿ ಉದ್ಘಾಟನೆಯನ್ನು ನಿರ್ವಹಿಸಿ ಮುಖ್ಯ ಭಾಷಣಗೈದರು.ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀ,ಕೊಂಡೆವೂರು ಶ್ರೀ ನಿತ್ಯಾನಂದ ಆಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಚಿನ್ಮಯ ಮಿಷನ್‌ನ ವಲಯ ಪ್ರಮುಖರಾದ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಸಾಧು ವಿನೋದ್ ಸ್ವಾಮೀಜಿ, ಬ್ರಹ್ಮಚಾರಿಣಿ ದಿಶಾ ಚೈತನ್ಯ, ಸ್ವಾಮಿ ಅಯ್ಯಪ್ಪದಾಸ್, ಸ್ವಾಮಿ ಸದ್ ಸ್ವರೂಪಾನಂದ ಸರಸ್ವತಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.ಸ್ವಾಗತ ಸಮಿತಿ ಅಧ್ಯಕ್ಷ ಮಧುಸೂಧನ ಅಯರ್ ಸ್ವಾಗತಿಸಿದರು.
ಅಕ್ಟೋಬರ್ 7 ರಿಂದ 21 ರ ವರೆಗೆ ನಡೆಯುವ ಈ ಯಾತ್ರೆಯನ್ನು ಶ್ರೀಮದ್ ಸ್ವಾಮಿ ಚಿದಾನಂದಪುರಿ ಮಹಾರಾಜ್ ಅವರು ಮುನ್ನಡೆಸುವರು.
0 Comments