ಪೆರ್ಲ : ಯುವ ಜನ ಪ್ರತಿಭಾ ಪ್ರೋತ್ಸಾಹದಂಗವಾಗಿ ನಡೆಸಲ್ಪಡುವ ಕೇರಳೋತ್ಸವ ಎಣ್ಮಕಜೆ ಪಂಚಾಯತ್ ವತಿಯಿಂದ ವಿವಿದೆಡೆ ನಡೆದು ಸಂಪನ್ನಗೊಂಡಿತು. ಸಾಂಸ್ಕೃತಿಕ ಸ್ಪರ್ಧೆಗಳು ಪಂಚಾಯತ್ ಹಾಲ್ ನಲ್ಲಿ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ನ್ಯೂಸ್ಟಾರ್ ಬೆದ್ರಂಪಳ್ಳ ಛಾಂಪಿಯನ್ ಶಿಫ್ ಗೆ ಪಾತ್ರವಾಯಿತು. ಮಹಾಲಿಂಗೇಶ್ವರ ಬಜಕೂಡ್ಲು ಪ್ರಥಮ ರನ್ನರ್ಸ್ , ಮಾಸ್ಕ್ ಮಲಂಗರೆ ದ್ವಿತೀಯ ರನ್ನರ್ಸ್ ಗಳಿಸಿಕೊಂಡಿತು. ಕಳೆದ ಐದು ವರ್ಷಗಳಲ್ಲಿ ಕೇರಳೋತ್ಸವವನ್ನು ಯಶಸ್ಚಿಯಾಗಿ ಸಂಘಟಿಸುವಲ್ಲಿ ಎಣ್ಮಕಜೆ ಪಂಚಾಯತು ಆಡಳಿತ ಮುತುವರ್ಜಿ ವಹಿಸಿದ್ದು ಇದಕ್ಕೆ ಸಹಕರಿಸಿದ ಸಂಘಟನೆಗಳಿಗೆಲ್ಲಾ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಭಿನಂದನೆ ಸಲ್ಲಿಸಿದ್ದಾರೆ.
0 Comments