Ticker

6/recent/ticker-posts

Ad Code

ಆತ್ಮಹತ್ಯೆಗೈಯ್ಯಲು ಬಾವಿಗೆ ಹಾರಿದ ಯುವತಿಯನ್ನು ರಕ್ಷಿಸುವ ಮದೈ ಬಾವಿಯ ಆವರಣ ಕುಸಿದು ಬಿದ್ದು 3 ಮಂದಿ ಮೃತ್ಯು


 ಆತ್ಮಹತ್ಯೆಗೈಯ್ಯಲು ಬಾವಿಗೆ ಹಾರಿದ ಯುವತಿಯನ್ನು ರಕ್ಷಿಸುವ ಮದೈ ಬಾವಿಯ ಆವರಣ ಕುಸಿದು ಬಿದ್ದು ಅಗ್ನಿಶಾಮಕ ದಳದ ಅಧಿಕಾರಿ ಸಹಿತ 3 ಮಂದಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕೊಲ್ಲಂ ನೆಡುವತ್ತಾರು ನೀವಾಸಿ ಅರ್ಚನ(35), ಆಕೆಯ ಗೆಳೆಯ ಶಿವಪ್ರಸಾದ್(22), ಕೊಟ್ಟಾರಕರ ಅಗ್ನಿಶಾಮಕ ದಳ ಅಧಿಕಾರಿ ಸೋಣಿ ಎಸ್ ಕುಮಾರ್ ಮೃತಪಟ್ಟವರು. ನಿನ್ನೆ (ಆದಿತ್ಯವಾರ) ರಾತ್ರಿ ಈ ಘಟನೆ ನಡೆದಿದೆ. ಮೂರು ಮಕ್ಕಳ ತಾಯಿಯಾದ ಅರ್ಚನ ಹಾಗೂ ಶಿವಪ್ರಸಾದ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ ಇಬ್ಬರೊಳಗೆ ಮಾತಿಗೆ ಮಾತು ಬೆಳೆದು ಅರ್ಚನ ಬಾವಿಗೆ ಹಾರಿದ್ದಳು. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳ ಅಧಿಕಾರಿ  ಸೋಣಿ ಎಸ್ ಕುಮಾರ್ ಬಾವಿಗಿಳಿದು ಅರ್ಚನಳನ್ನು ಮೇಳಕೆತ್ತುವ ವೇಳೆ ಬಾವಿಯ ಆವರಣ ಕುಸಿದು ಬಿದ್ದಿದೆ. ಈ ವೇಳೆ ಆವರಣ ಬದಿಯಲ್ಲಿ ನಿಂತಿದ್ದ ಶಿವಪ್ರಸಾದ್ ಸಹ ಬಿದ್ದನೆನ್ನಲಾಗಿದೆ. ಮೂರು ಮಂದಿಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ

Post a Comment

0 Comments