Ticker

6/recent/ticker-posts

Ad Code

ಹಿರಿಯ ಭಜನೆ ಸಂಕೀರ್ತನಗಾರ, ಹಾರ್ಮೋನಿಯಂ ವಾದಕ ವೆಂಕಟ್ರಮಣ ಆಚಾರ್ಯ ನಿಧನ


ಮಂಜೇಶ್ವರ : ಕಾಸರಗೋಡಿನ ಹಿರಿಯ ಭಜನೆ ಸಂಕೀರ್ತನಗಾರ,ಹಾರ್ಮೋನಿಯಂ ವಾದಕ  ಪೆರ್ಲ ವೆಂಕಟ್ರಮಣ ಆಚಾರ್ಯ (82) ವಯೋ ಸಹಜ ಅಸೌಖ್ಯದಿಂದ ರವಿವಾರ ರಾತ್ರಿ ನಿಧನರಾದರು.

ಪ್ರಸ್ತುತ ಮಂಜೇಶ್ವರ ನಿವಾಸಿಯಾದ ಇವರು  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದಾರೆ. ಒಂದು ಕಾಲದಲ್ಲಿ ಸಂಘದ ಹಾಡು ಇವರೇ ಹಾಡುತ್ತಿದ್ದರು. ಭಜನೆ ಹಾಡುಗಾರರಾಗಿಯೂ,  ಹಾರ್ಮೋನಿಯಂ ವಾದಕರಾಗಿದ್ದ ಇವರು ಮೂಲತಃ  ಪೆರ್ಲದವರಾಗಿದ್ದಾರೆ. ಇವರು ಎಲ್ಲೆಡೆಯೂ ಹಾಡುತ್ತಿದ್ದ  "ನಮೋ ವೆಂಕಟೇಶ" ಭಜನೆ ಖ್ಯಾತಿ ಪಡೆದಿತ್ತು. ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಸಂಘದ ಪ್ರಾರಂಭ ಕಾರ್ಯಕರ್ತರಾಗಿದ್ದರು.  ವಿಶ್ವಕರ್ಮ ಸಾಹಿತ್ಯ ದರ್ಶನ ಬಳಗದ ವಿಶ್ವದರ್ಶನ ಕಾರ್ಯಕ್ರಮದಲ್ಲಿ ಇವರ ಜೀವಮಾನ ಸಾಧನೆಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಭಜನೆ ಸಂಕೀರ್ತನೆಯ ದೀರ್ಘ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನ ನೀಡಿ ಗೌರವಿಸಿದೆ. ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತಿನಿಂದ ಸನ್ಮಾನಗೊಂಡಿದ್ದರು.

ಮೃತರು ಪತ್ನಿ,ಮಗ,ಪುತ್ರಿಯರು, ಅಳಿಯಂದಿರನ್ನಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಮಂಜೇಶ್ವರ ಬೀಚ್ ರಸ್ತೆ ಅವರ ನಿವಾಸದಲ್ಲಿ  ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Post a Comment

0 Comments