Ticker

6/recent/ticker-posts

Ad Code

ಕಾಡು ಹಂದಿ ಹಾವಳಿಯ ವಿರುದ್ದ ನಗರಸಭಾ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ಮನೆಗೆ ತಲುಪಿದ ಮಹಿಳೆಯ ಮೇಲೆ ಕಾಡು ಹಂದಿ ದಾಳಿ


 ಕೋಜಿಕ್ಕೋಡು: ಕಾಡು ಹಂದಿ ಹಾವಳಿಯ ವಿರುದ್ದ ನಗರಸಭಾ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ಮನೆಗೆ ತಲುಪಿದ ಮಹಿಳೆಯ ಮೇಲೆ ಕಾಡು ಹಂದಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ. ಕೋಜಿಕ್ಕೋಡು ಪುಲ್ ಪರಂಬ ನಿವಾಸಿ ಸಫಿಯ ಗಾಯಗೊಂಡ ಮಹಿಳೆ. ಇವರ ತೋಳಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

 ಈ ಪ್ರದೇಶದಲ್ಲಿ ಕಾಡು ಹಂದಿ ಹಾವಳಿ ವ್ಯಾಪಕವಾಗಿತ್ತು. ಕಾಡು ಹಂದಿ ನಿಗ್ರಹಕ್ಕೆ ಅಧಿಕೃತರು ಮುಂದಾಗುತ್ತಿಲ್ಲ ಎಂದು ಆರೋಪಿಸಿ ಈ ಪ್ರದೇಶದ ಜನರು ನಗರಸಭಾ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಸತ್ಯಾಗ್ರಹದಲ್ಲಿ ಸಫಿಯ ಸಹ ಭಾಗವಹಿಸಿದ್ದರು.ಕಾರ್ಯಕ್ರಮಮುಗಿಸಿ ಹಿಂತಿರುಗಿದ ಸಫಿಯ, ಮನೆಯ ಬಳಿಯಿರುವ ತರಕಾರಿ ಕೃಷಿಗೆ ನೀರು ಹಾಕುತ್ತಿರುವಂತೆಯೇ ಕಾಡು ಹಂದಿ ದಾಳಿ ನಡೆದಿದೆ.

Post a Comment

0 Comments