ಕೇರಳ ಲೋಕ ಸೇವಾ ಆಯೋಗ ನಡೆಸುವ ಯುಪಿಎಸ್‌ಟಿ ಕನ್ನಡ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದ ಸರಿತಾ ಇ ಬೇಳ ಅವರನ್ನು ಬಿಜೆಪಿ ಬದಿಯಡ್ಕ ಪಶ್ಚಿಮ ವಲಯ ಸಮಿತಿ ವತಿಯಿಂದ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು. ಅಧ್ಯಕ್ಷ ಮಹೇಶ್ ವಳಕುಂಜ ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಅಭಿನಂದಿಸಿ ಮಾತನಾಡಿ ಗೃಹಿಣಿಯಾಗಿದ್ದುಕೊಂಡು ಕಾಸರಗೋಡಿನ ಇತಿಹಾಸದಲ್ಲಿ ಸದಾ ನೆನಪಿಟ್ಟುಕೊಳ್ಳುವ ಅವರ ಸಾಧನೆ ನಾಡಿಗೆ ಮಾದರಿಯಾಗಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಕಲಿತು ಸಾಧನೆಯನ್ನು ಮಾಡಿದ ಇವರಿಗೆ ಆದಷ್ಟು ಬೇಗ ಸರಕಾರಿ ಉದ್ಯೋಗ ಲಭಿಸಲಿ ಎಂದರು.
ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಅಶ್ವಿನಿ ಮೊಳೆಯಾರು,ಪಶ್ಚಿಮ ವಲಯ ಪ್ರಧಾನ ಕಾರ್ಯದರ್ಶಿ ಬಾಲಗೋಪಾಲ ಏಣಿಯರ್ಪು, ಪ್ರೇಮ ಬೇಳ, ಪ್ರಕಾಶ್ ಕುಲಾಲ್, ಪ್ರಶಾಂತ್ ಶೆಟ್ಟಿ ಬೇಳ, ಸುಧೀರ್ ನೀರ್ಚಾಲು ಮೊದಲಾದವರು ಜೊತೆಗಿದ್ದರು.ಇವರ ಪತಿ ರವಿತೇಜ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.ಯುಪಿಎ ಸ್‌ಟಿ ಕನ್ನಡದಲ್ಲಿ ಪ್ರಥಮ ರ್‍ಯಾಂಕ್ ಪಡೆದುದರ ಜೊತೆಯಲ್ಲಿ ಎಲ್‌ಡಿ ಕ್ಲರ್ಕ್ ವಿಭಾಗದಲ್ಲೂ ಕೂಡ 234ನೇ ರ್ಯಾಂಕ್ ಪಡೆದಿರುತ್ತಾರೆ.
0 Comments