ಪೆರ್ಲ : ಬಂಟ ಮಹಿಳಾ ಸಂಘ ಬೆಳ್ಳೂರು ಇದರ ಆಶ್ರಯದಲ್ಲಿ ಒ.12ಕ್ಕೆ ನಡೆಯಲಿರುವ 20ನೇ ವರ್ಷಾಚರಣೆಯ ಅಂಗವಾಗಿ 13ನೇ ಕಾರ್ಯಕ್ರಮವಾದ ಬಂಟ ಮಹಿಳಾ ಅಡುಗೆ ಸ್ಪರ್ಧೆಯ ಆಮಂತ್ರಣ ಪತ್ರ ಬಿಡುಗಡೆ ನಾಟೆಕಲ್ಲು ರತ್ನಾ ಕ್ಲಿನಿಕ್ ನಲ್ಲಿ ನಡೆಯಿತು. ಸಾಹಿತಿ,ಪ್ರಗತಿಪರ ಕೃಷಿಕ ದಯಾನಂದ ರೈ ಕಳ್ವಾಜೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಬಂಟರ ಸಂಘ ಬೆಳ್ಳೂರು ಅಧ್ಯಕ್ಷ ಮನಮೋಹನ್ ರೈ ಪಿಂಡಗ. ಕಾರ್ಯದರ್ಶಿ ಜಯರಾಜ್ ರೈ ಎಡಮೊಗರು. ನಿವೃತ್ತ ಪ್ರಿನ್ಸಿಪಾಲ್ ದೇವಾನಂದ ರೈ ನಾಟೆಕಲ್ಲು,ಬಂಟ ಮಹಿಳಾ ಸಂಘದ ಅಧ್ಯಕ್ಷೆ ವಿದ್ಯಾ ಮೋಹನ್ ದಾಸ್ ರೈ. ಜಯಲಕ್ಷ್ಮಿ ಕೆ ಶೆಟ್ಟಿ ಕಳ್ವಾಜೆ. ಶ್ಯಾಮಲಾ ಯಸ್ ರೈ,ಮಾಜಿ ಪಂಚಾಯತ್ ಅಧ್ಯಕ್ಷೆ ಮಾಲತಿ ಜೆ ರೈ, ಪೂರ್ಣಿಮಾ ಜಯರಾಜ್ ರೈ. ನವೀನ ಆರ್ ರೈ, ಸುಜಾತ ಮನಮೋಹನ್ ರೈ ಪಿಂಡಗ,ಸುನಿತಾ ಯಮ್ ರೈ ಪಿಂಡಗ,ಲತಾ ಸುಂದರ್ ರಾಜ್ ರೈ ಮೊದಲಾದವರು ಉಪಸ್ಥಿತರಿದ್ದರು.ಒ.12ಕ್ಕೆ ಪಿಂಡಗ ಎಂಬಲ್ಲಿ ಕಾರ್ಯಕ್ರಮ ಜರಗಲಿದ್ದು ದ.ಕ.ಹಾಗೂ ಕಾಸರಗೋಡು ಜಿಲ್ಲೆಯ ಬಂಟ ಮಹಿಳೆಯರಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
0 Comments