13 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ 55 ವರ್ಷ ಪ್ರಾಯದ ಆರೋಪಿಗೆ 41 ವರ್ಷ ಕಠಿಣ ಸಜೆ ಹಾಗೂ 49 ಸಾವಿರ ರೂ.ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮಲಪ್ಪುರಂ ನಿಲಂಬೂರು ಪಳ್ಳಿಪ್ಪಾಡಂ ಅಕ್ಬರ್ ಎಂಬಾತನಿಗೆ ನಿಲಂಬೂರು ಪ್ರಥಮ ದರ್ಜೆ ನ್ಯಾಯಾಲಯ ಈ ಶಿಕ್ಷೆ ನೀಡಿದೆ. ದಂಡ ಪಾವತಿಸದಿದ್ದಲ್ಲಿ 16 ತಿಂಗಳು ಅಧಿಕ ಸೆರೆಮನೆವಾಸ ಮಾಡಬೇಕಾಗಿದೆ.
2023 ಡಿಸೆಂಬರ್ 22, 2024 ಜನವರಿ 14 ಎಂಬೀ ದಿನಗಳಲ್ಲಿ ಬಾಲಕನಿಗೆ ಕಿರುಕುಳ ನೀಡಲಾಗಿತ್ತು. ಬೆಳಗ್ಗೆ ಶಾಲೆಗೆ ಹೋಗುವಾಗ, ಸಾಯಂಕಾಲ ಮಸೀದಿಯಲ್ಲಿ ನಮಾಜು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಬಾಲಕನಿಗೆ ಕಿರುಕುಳ ನೀಡಲಾಗಿತ್ತು. ಆರೋಪಿಯ ವಿರುದ್ದ ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು
0 Comments