Ticker

6/recent/ticker-posts

Ad Code

ಮನೆಯೊಳಗೆ ಕುಸಿದು ಬಿದ್ದು ಗೃಹಿಣಿ ಮೃತ್ಯು


 ಗೃಹಿಣಿ ಮನೆಯೊಳಗೆ‌ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕುಂಡಂಗುಯಿ ಕಾರಕ್ಕೋಡ್ ವಲಿಯಡ್ಕಂ ದೇವೊಜಿ ರಾವ್ ಅವರ ಪತ್ನಿ ಮೀನ ಯಾನೆ ಮೀನಾಕ್ಷಿ (55) ಮೃತಪಟ್ಟ ಮಹಿಳೆ. ನಿನ್ನೆ (ಸೋಮವಾರ) ಮಧ್ಯಾಹ್ನ ಅವರು ಮನೆಯಲ್ಲಿ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ.  ಮೃತರು ಪತಿ, ಮಕ್ಕಳಾದ ಹರ್ಷಿತ.ಜಿ, ಲೇಖನ.ಜಿ, ಮೋನಿಷ ಜಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಬೇಡಗಂ ಪೊಲೀಸರು ಕೇಸು ದಾಖಲಿಸಿದರು

Post a Comment

0 Comments