Ticker

6/recent/ticker-posts

Ad Code

ನೀರ್ಚಾಲಿನಲ್ಲಿ ನೂತನ ಬಿಜೆಪಿ ಕಾರ್ಯಾಲಯ ಉದ್ಘಾಟನೆ


 ಬದಿಯಡ್ಕ: ಭಾರತೀಯ ಜನತಾ ಪಾರ್ಟಿಯ ಬದಿಯಡ್ಕ ವೆಸ್ಟ್  (ಪಶ್ಚಿಮ ವಲಯ) ಸಮಿತಿಯ  ಕಚೇರಿ ನೀರ್ಚಾಲಿನಲ್ಲಿ ಉದ್ಘಾಟನೆಗೊಂಡಿತು. ಪಕ್ಷದ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ಪಕ್ಷದ ಪಂಚಾಯತು ಸಮಿತಿ ಅಧ್ಯಕ್ಷ ಮಹೇಶ್ ವಳಕುಂಜ ಅವರು ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಕಾರ್ಯದರ್ಶಿ ಡಿ.ಶಂಕರ, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಬಾಲಗೋಪಾಲ ಏಣಿಯರ್ಪು, ಅಶ್ವಿನಿ ಮೊಳೆಯಾರು, ಮುರಳೀಧರ ಯಾದವ್, ಸುಕುಮಾರ ಕುದ್ರೆಪಾಡಿ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು. ಪಂಚಾಯತು ಸಮಿತಿ ಉಪಾಧ್ಯಕ್ಷ ಮಧುಚಂದ್ರ ಮಾನ್ಯ ಸ್ವಾಗತಿಸಿ  ಮಂಡಲ ಕಾರ್ಯದರ್ಶಿ ರಜನಿ ಸಂದೀಪ್ ವಂದಿಸಿದರು. ಅಧ್ಯಕ್ಷ ಮಹೇಶ್ ವಳಕುಂಜ ಅವರು ಬಿಜೆಪಿ ಪಶ್ಚಿಮ ವಲಯ ನೂತನ ಸಮಿತಿಯನ್ನು ಘೋಷಿಸಿದರು.

Post a Comment

0 Comments