Ticker

6/recent/ticker-posts

Ad Code

ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ 8 ನೇ ಕಾಸರಗೋಡು ಯಕ್ಷೋತ್ಸವಕ್ಕೆ ಚಾಲನೆ

 


ಕಾಸರಗೋಡು  : ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಜರುಗಿದ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ 8 ನೇ ಕಾಸರಗೋಡು ಯಕ್ಷೋತ್ಸವವನ್ನು ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾಗದ  ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಮನಸ್ಸಿಗೂ ಮೆದುಳಿಗೂ ಉಲ್ಲಾಸ ನೀಡುವ ಅಧ್ಬುತ ಕಲೆ ಯಕ್ಷಗಾನ ಇದೊಂದು ಆರಾದನ ಕಲೆಯಾಗಿದ್ದು ಮನುಷ್ಯನ ಮನಸ್ಸಿನಲ್ಲಿ ಸಮತೋಲನ ಕಾಪಾಡುವ ಅಧ್ಬುತವಾದ ಚಿಕಿತ್ಸಾ ಕಲೆಯಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾl ಜನಾರ್ದನ್ ನಾಯ್ಕ್ ಹೇಳಿದರು.

ತರಬೇತಿ ಕೇಂದ್ರದ ಅಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹಿರಿಯ ಭಾಗವತ ನಿವೃತ್ತ ಅಧ್ಯಾಪಕ ತಲ್ಪನಾಜೆ ವೆಂಕಟ್ರಮಣ ಭಟ್ ಅವರನ್ನು ಸನ್ಮಾನಿಸಲಾಯಿತು. ತರಬೇತಿ ಕೇಂದ್ರದ ಗುರುಗಳಾದ ರಾಕೇಶ್ ರೈ ಅಡ್ಕ ಶುಭಹಾರೈಸಿದರು. ಕೆ.ವಿ.ತಿರುಮಲೇಶ ಹೊಳ್ಳ ಸ್ವಾಗತಿಸಿ ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿ ಕಿಶೋರ್ ಕುಮಾರ್ ವಂದಿಸಿದರು

Post a Comment

0 Comments