9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣದಲ್ಲಿ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿಯನ್ನು ಸಸ್ಪೆಂಡ್ ಮಾಡಲಾಗಿದೆ. ಪಾಲಕ್ಕಾಡ್ ಕಣ್ಣಾಡಿ ಹಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿ ಅರ್ಜುನ್ ಆತ್ಮಹತ್ಯೆಗೈದ ಪ್ರಕರಣದಲ್ಲಿ ಶಿಕ್ಷಕಿ ಆಶಾ, ಮುಖ್ಯ ಶಿಕ್ಷಕಿ ಲಿಸಿ ಎಂಬಿವರನ್ನು ಮೆನೇಜ್ ಮೆಂಟ್ ಸಸ್ಪೆಂಡ್ ಮಾಡಿದೆ.
ವಿದ್ಯಾರ್ಥಿಗಳು ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಮೆಸೇಜ್ ಕಳುಹಿಸಿದ್ದು ಇದನ್ನು ಶಿಕ್ಷಕಿ ಆಶಾ ಪ್ರಶ್ನಿಸಿದ್ದರು. ಇದೇ ರೀತಿ ಮುಂದುವರಿದಲ್ಲಿ ಸೈಬರ್ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದರು. ಶಿಕ್ಷಕಿಯ ಮಾತಿನಿಂದ ಬೆದರಿದ ಅರ್ಜುನ್ ಮನೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದನು. ಅರ್ಜುನ್ ಆತ್ಮಹತ್ಯೆ ಬೆನ್ನಲ್ಲೇ ಶಾಲೆಯಲ್ಲಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಸಸ್ಪೆಂಡ್ ಮಾಡಲಾಗಿದೆ
0 Comments