ಕಾಞಂಗಾಡ್: ಸಿಪಿಎಂ ನೇತೃತ್ವದ ರಾಜ್ಯ ಸರಕಾರವು ಕೃಷಿಕರ ವಿರೋಧಿ ನಿಲುವು ತಾಳುತ್ತಿದೆಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಶಾನ್ ಜಾರ್ಜ್ ಹೇಳಿದರು. ವನ್ಯಜೀವಿ ದಾಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ವೆಳ್ಳರುಕುಂಡುವಿನಲ್ಲಿ 63 ದಿನಗಳಿಂದ ನಡೆಯುತ್ತಿರುವ ಕೃಷಿಕ ಸ್ವರಾಜ್ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಅವರು ಈ ರೀತಿ ಹೇಳಿದರು. ಕೃಷಿ ವಲಯಕ್ಕೆ ದಾಳಿ ನಡೆಸುವ ವನ್ಯಜೀವಿಗಳ ಹತ್ಯೆಗೆ ಪೊಲೀಸರಿಗೆ ಅನುಮತಿ ನೀಡಬೇಕು ಎಂದವರು ಒತ್ತಾಯಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ವಲಯ ಉಪಾಧ್ಯಕ್ಷ ಕೆ.ನಿತ್ಯಾನಂದನ್, ಸುಕುಮಾರನ್ ಕಾಲಿಕಡವ್, ಉತ್ತಮನ್ ಮೊದಲಾದವರು ಭಾಗವಹಿಸಿದರು
0 Comments