ಪೈವಳಿಕೆ : ಕ್ಯಾಂಪ್ಕೊ ಸಂಸ್ಥೆ ಮಂಗಳೂರು ಇದರ ವತಿಯಿಂದ "ಸಾಂತ್ವನ" ಯೋಜನೆಯಡಿಯಲ್ಲಿ ಬಾಯಾರು ಕ್ಯಾಂಪ್ಕೊ ಶಾಖೆಯ ಸಕ್ರಿಯ ಸದಸ್ಯರಾದ ಇಬ್ರಾಹಿಂ ಪಲ್ಲಕುಡೇಲ್. ಪ್ಯೆವಳಿಕೆ ಇವರ ಪುತ್ರರಾದ ಅಬ್ದುಲ್ ಅಜೀಜ್ ರವರ ಮೂತ್ರಪಿಂಡದ ಕಸಿ ಶಸ್ತ್ರಚಿಕಿತ್ಸೆಗಾಗಿ ಸಹಾಯಧನವಾಗಿ ಮೂರು ಲಕ್ಷದ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಶಂಕರ ನಾರಾಯಣ ಭಟ್ ಖಂಡಿಗೆ ಇವರು ಬಾಯಾರು ಶಾಖೆಯಲ್ಲಿ ಹಸ್ತಾಂತರಿಸಿದರು.
ಕ್ಯಾಂಪ್ಕೊ ನಿರ್ದೆಶಕರಾದ ಬಾಲಕೃಷ್ಣ. ರೈ, ಬಾನೊಟ್ಟು. ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕ್ಯಾಂಪ್ಕೋ ಬದಿಯಡ್ಕ ವಲಯ ಪ್ರಬಂಧಕರಾದ ಶ್ರೀಚಂದ್ರ ಯಂ. ಬಾಯಾರು ಶಾಖಾ ಪ್ರಬಂಧಕರಾದ ರಮೇಶ್ ವೈ. ಮತ್ತು ಬಾಯಾರು ಕ್ಯಾಂಪ್ಕೊ ಸಿಬ್ಬಂದಿಗಳು ಉಪಸ್ಥಿತರಿದ್ದರು.
0 Comments