ಪೆರ್ಲ : ಕಾಸರಗೋಡು ಜಿಲ್ಲಾ ವಾಣಿಯ ಗಾಣಿಗ ಸಭಾದ ಪೆರ್ಲ ಘಟಕದ ವಾರ್ಷಿಕ ಮಹಾಸಭೆ ಮತ್ತು ಕುಟುಂಬ ಸಂಗಮ ಕಾರ್ಯಕ್ರಮ ಪೆರ್ಲ ಪಡ್ರೆ ಸಭಾಭವನದಲ್ಲಿ ನಡೆಯಿತು. ಬೆಳಿಗ್ಗೆ ಸಮಮುದಾಯದ ಹಿರಿಯರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪೆರ್ಲ ಘಟಕದ ಅಧ್ಯಕ್ಷ ಗೋಪಾಲ ಸೂರ್ಡೇಲು ಅಧ್ಯಕ್ಷತೆ ವಹಿಸಿದರು.ಸಮುದಾಯದ ಕುರಿತು ಈಶ ವಿದ್ಯಾಲಯ ಪುತ್ತೂರು ಪ್ರಾಂಶುಪಾಲರು ಡಾ. ಗೋಪಾಲ ಕೃಷ್ಣ ಮಾಹಿತಿ ನೀಡಿದರು.ಮುಖ್ಯ ಅಥಿತಿಗಳಾಗಿ ವಾಣಿಯ ಗಾಣಿಗ ಸೇವಾ ಸಂಘ ಪೆರ್ಣೇ ಕ್ಷೇತ್ರ ಅಧ್ಯಕ್ಷ ಜಯಂತ ಪಾಟಳಿ, ಕಾಸರಗೋಡು ಜಿಲ್ಲಾ ವಾಣಿಯ ಗಾಣಿಗ ಸಂಘ ಪ್ರದಾನ ಕಾರ್ಯದರ್ಶಿ ರತ್ನಾಕರ ಎಸ್ ಒಡಂಗಲ್ಲು ಶುಭ ಕೋರಿದರು. ನಿವೃತ ಶಿಕ್ಷಕಿ ಕುಸುಮಾವತಿ ಅವರನ್ನು ಸನ್ಮಾನಿಸಲಾಯಿತು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯದರ್ಶಿ ಜಯಂತ ನೆಕ್ಕರೆಪದವು ವಾರ್ಷಿಕ ವರದಿ ವಾಚಿಸಿದರು. ಗೋಪಾಲ ಕೃಷ್ಣ ಗೊಳಿಕಟ್ಟೆ ಸ್ವಾಗತಿಸಿ , ಚಂದ್ರಹಾಸ ಶೇಣಿ ವಂದಿಸಿದರು. ಸುರೇಶ್ ನೆಲ್ಲಿಕುಂಜೆ ಕಾರ್ಯಕ್ರಮ ನಿರೂಪಿಸಿದರು.ಸದಸ್ಯರಿಂದ ವಿವಿಧ ಮನೋರಂಜನ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
0 Comments