ಕುಂಬಳೆ: ಸರಕಾರೀ ನೌಕರನಾದ ಯುವಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಈತನನ್ನು ರಕ್ಷಿಸಲು ಬಾವಿಗಿಳಿದ ಸಹೋದರನನ್ನು ಅಗ್ನಿಶಾಮಕ ದಳ ಸಿಬಂದಿಗಳು ಮೇಲಕ್ಕೆತ್ತಿದ್ದಾರೆ.
ಕುಂಬಳೆ ನಾರಾಯಣ ಮಂಗಲ ನಿವಾಸಿ ವಿವೇಕ್ ಶೆಟ್ಟಿ (28) ಬಾವಿಗೆ ಬಿದ್ದ ಸರಕಾರೀ ನೌಕರ. ನಿನ್ನೆ (ಆದಿತ್ಯವಾರ) ರಾತ್ರಿ 9.30 ಕ್ಕೆ ಈ ಘಟನೆ ನಡೆದಿದೆ. ವಿವೇಕ್ ಬಾವಿಗೆ ಬೀಳುವುದನ್ನು ಕಂಡ ಸಹೋದರ ತೇಜಸ್ ಕೂಡಲೇ ಬಾವಿಗಿಳಿದಿದ್ದನು. ಆದರೆ ಅವರಿಂದ ವಿವೇಕ್ ನನ್ನು ಮೇಲಕೆತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ಮಾಹಿತಿ ತಿಳಿದು ಆಗಮಿಸಿದ ಉಪ್ಪಳದ ಅಗ್ನಿಶಾಮಕ ದಳ ಸಿಬಂದಿಗಳು ಇಬ್ಬರನ್ನೂ ಮೇಲಕ್ಕೆತ್ತಿ ಕುಂಬಳೆ ಸಹಕಾರಿ ಆಸ್ಪತ್ರೆಗೆ ತಲುಪಿಸಿದರು. ಈ ವೇಳೆ ವಿವೇಕ್ ಕೊನೆಯುಸಿರೆಳೆದಿದ್ದರು. ಮರತ ವಿವೇಕ್ ಶೆಟ್ಟಿ ಲೀಗಲ್ ಮೆಟ್ಟಾಲಜಿ ವಿಭಾಗದಲ್ಲಿ ಸೀನಿಯರ್ ಕ್ಲರ್ಕ್ ಆಗಿದ್ದರು. ದಿವಂಗತ ರಾಂ ಪ್ರಸಾದ್ ಶೆಟ್ಟಿ ಅವರ ಪುತ್ರರಾದ ಮೃತರು ತಾಯಿ ಗೀತ, ಸಹೋದರರಾದ ತೇಜಸ್, ನವನೀತ ಶೆಟ್ಟಿ ಎಂಬಿವರನ್ನು ಅಗಲಿದ್ದಾರೆ
0 Comments