Ticker

6/recent/ticker-posts

Ad Code

ಖತ್ತಾರ್ ನಲ್ಲಿ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್ ಡಿಕ್ಕಿ ಹೊಡೆದು ತುಮಿನಾಡು ನಿವಾಸಿ ಮೃತ್ಯು


 ಮಂಜೇಶ್ವರ: ಖತ್ತಾರ್ ನಲ್ಲಿ  ನಿಯಂತ್ರಣ ತಪ್ಪಿದ ಅಂಬ್ಯುಲನ್ಸ್ ಡಿಕ್ಕಿ ಹೊಡೆದು ತುಮಿನಾಡು ನಿವಾಸಿ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ತುಮಿನಾಡು ಹಿಲ್ ಟಾಪ್ ನಿವಾಸಿ ಅಬೂಬಕರ್ ಅವರ ಪುತ್ರ ಹಾರಿಸ್(38) ಮೃತಪಟ್ಟ ವ್ಯಕ್ತಿ. ಇವರು ಖತ್ತಾರ್ ನಲ್ಲಿ ಟ್ಯಾಕ್ಸಿ ಚಾಲಕರಾಗಿದ್ದರು.  ಈ ಹಿಂದೆ ಊರಿಗೆ ಬಂದಿದ್ದ ಅವರು 14 ದಿನಗಳ ಹಿಂದೆಯಷ್ಟೆ ಖತ್ತಾರ್ ಗೆ ಮರಳಿದ್ದರು. ಇವರು ಚಲಾಯಿಸಿದ ಟ್ಯಾಕ್ಸಿಯ ಟಯರ್ ಪಂಕ್ಚರ್ ಆಗಿದ್ದು ರಸ್ತೆ ಬದಿಯಲ್ಲಿ ನಿಲ್ಲಿಸಿ ಅದನ್ನು ಬದಲಾಯಿಸುತ್ತಿದ್ದಾಗ ಅಮಿತ ವೇಗದಿಂದ, ನಿಯಂತ್ರಣ ತಪ್ಪಿ ಬಂದ ಅಂಬ್ಯುಲನ್ಸ್ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ  ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮೃತರು ತಾಯಿ, ಪತ್ನಿ ಮಕ್ಕಳು, ಸಹೋದರ ಸಹೋದರಿಯರನ್ನು ಅಗಲಿದ್ದಾರೆ

Post a Comment

0 Comments