Ticker

6/recent/ticker-posts

Ad Code

ಕಾಡು ಕಡಿಯುವ ಯಂತ್ರ ಬಳಸಿ ಜತೆಗೆ ಕೆಲಸದಲ್ಲಿದ್ದ ಗೆಳೆಯನ ಕುತ್ತಿಗೆ ಕೊಯ್ದು ಕೊಲೆ


                                    ಪ್ರವೀಣ್
 ಕಾಡು ಕಡಿಯುವ ಯಂತ್ರ ಉಪಯೋಗಿಸಿ ಗೆಳೆಯನನ್ನು ಕುತ್ತಿಗೆ ಕೊಯ್ದು ಕೊಲೆ ಮಾಡಿದ ಘಟನೆ ನಡೆದಿದೆ.‌ಮಲಪ್ಪುರಂ ಚಾತ್ತಯಾರ್ ನಿವಾಸಿ ಪ್ರವೀಣ್ ಕೊಲೆಗೀಡಾದ ವ್ಯಕ್ತಿ. ಈತನ ಗೆಳೆಯ ಮೊಯ್ದೀನ್ ಕುಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. 

    ಪ್ರವೀಣ್ ಹಾಗೂ ಮೊಯ್ದೀನ್ ಕುಟ್ಟಿ ಕಾಡು ಕಡಿಯುವ ಕಾರ್ಮಿಕರಾಗಿದ್ದು ಗೆಳೆಯರಾಗಿದ್ದರು. ನಿನ್ನೆ (ಆದಿತ್ಯವಾರ) ಅವರು ಕೆಲಸದ ನಡುವೆ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಯಿತು. ಈ ಕೂಡಲೇ‌ ಮೊಯ್ದೀನ್ ಕುಟ್ಟಿ ಮಿಶನ್ ಕೈಯಲ್ಲಿ ಹಿಡಿದು ಪ್ರವೀಣನ ಕುತ್ತಿಗೆ ಕೊಯ್ದಿದ್ದಾನೆ. ಘಟನೆಯ ನಂತರ ಓಡಿ ಪರಾರಿಯಾದ ಮೊಯ್ದೀನ್ ಕುಟ್ಟಿಯನ್ನು ಪೊಲೀಸರು ಹಾಗೂ ಊರವರು ಬೆನ್ನಟ್ಟಿ ಹಿಡಿದರು

Post a Comment

0 Comments