ಬದಿಯಡ್ಕ: ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಹಾಗೂ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಿರುವನಂತಪುರದಲ್ಲಿ ನಡೆಯಲಿರುವ ಕೇರಳ ರಾಜ್ಯ ಮಟ್ಟದ ಸಬ್ ಜೂನಿಯರ್ ವಿಭಾಗದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸುವ ತಂಡದಲ್ಲಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳಾದ ಪವಿತ್ರ ಕೆ. ಹಾಗೂ ರಹ್ಮತ್ ಲಾಝಿಮ ಟೇಬಲ್ ಟೆನ್ನಿಸ್ ನಲ್ಲೂ, ಭೂಮಿಕಾ ಆರ್.ಕೆ ಹಾಗೂ ಫಲ್ಹುಲ್ ಆಬಿದ್ ಕ್ರಮವಾಗಿ ಹುಡುಗಿಯರ ಹಾಗೂ ಹುಡುಗರ ಹ್ಯಾಂಡ್ ಬಾಲ್ ತಂಡದಲ್ಲೂ ಸ್ಥಾನ ಗಿಟ್ಟಿಸಿದ್ದಾರೆ.
0 Comments