Ticker

6/recent/ticker-posts

Ad Code

ದೀಪಾವಳಿ ಅಂಗವಾಗಿ ಮನೆಯಂಗಳದಲ್ಲಿ ಅಲಂಕಾರ ದೀಪ ಸಿದ್ದಪಡಿಸುವ ವೇಳೆ ವಿದ್ಯುತ್ ಶಾಕ್ ತಗುಲಿ ಯುವಕ‌‌ ಮೃತ್ಯು


 ಸೀತಾಂಗೋಳಿ: ವಿದ್ಯುತ್ ಶಾಕ್ ತಗುಲಿ ಯುವಕ ಮೃತಪಟ್ಟ ಘಟನೆ ನಡೆದಿದೆ. ಪುತ್ತಿಗೆ ಆಚಾರಿಮೂಲೆ ನಿವಾಸಿ ರಾಜೇಶ್ ನಿಲಯದ ರಾಜೇಶ್ ಆಚಾರ್ಯ(37) ಮೃತಪಟ್ಟವರು. ನಿನ್ನೆ (ಸೋಮವಾರ) ರಾತ್ರಿ ದೀಪಾವಳಿ ಆಚರಣೆಯ ಅಂಗವಾಗಿ ಮನೆಯಂಗಳದಲ್ಲಿ ಅಲಂಕಾರ ದೀಪ  ಸಿದ್ದಪಡಿಸುವ ವೇಳೆ ವಿದ್ಯುತ್ ಶಾಕ್ ಬಡಿದಿತ್ತು. ಮನೆಯವರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮೃತರು ತಂದೆ ನಾಗೇಶ್ ಆಚಾರ್ಯ, ತಾಯಿ ಹೇಮಲತ, ಪತ್ನಿ ಪವಿತ್ರ, ಮಕ್ಕಳಾದ ಪ್ತಣ್ವಿತ್, ಧನ್ವಿತ್, ಸಹೋದರರಾದ ಕಿರಣ್, ಪ್ರವೀಣ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments