ಕಾಸರಗೋಡು: ಬದಿಯಡ್ಕ ನಿವಾಸಿ ಮಂಗಳೂರು ಶ್ರೀ ಗೋಕರ್ಣಾನಾಥೇಶ್ವರ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಪ್ರೊ. ಉದಯ ಕುಮಾರ್ ಬಿ. ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ.
ಹಲವು ವರ್ಷಗಳಿಂದ ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಹಾಗೂ ಕೇರಳದ ವಿವಿಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಇವರು ಈ ಹಿಂದೆ ಮಂಗಳೂರು ವಿವಿಯ ವಿವಿಧ ವಿಭಾಗಗಳಲ್ಲೂ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಅಖಿಲ ಕೇರಳ ಯಾದವ ಸಭಾ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಯಾದವ ಸಭಾ ಕಾಸರಗೋಡು ತಾಲೂಕು, ಜಿಲ್ಲಾ ಮಟ್ಟದಲ್ಲೂ ಸೇವೆ ಸಲ್ಲಿಸಿದ್ದಾರೆ. ಬದಿಯಡ್ಕ ನಿವಾಸಿ ಬಾಲಕೃಷ್ಣ ಹಾಗೂ ಯಶೋಧ ದಂಪತಿಯ ಪುತ್ರರಾಗಿರುವ ಇವರ ಪತ್ನಿ ದೀಪಾ ಎಸ್. ನೀರ್ಚಾಲು ಮಹಾಜನ ಸಂಸ್ಕೃತ ಹೈಯರ್ ಸೆಕೆಂಡರಿ ಶಾಲೆಯ ಇಂಗ್ಲೀಷ್ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
0 Comments