ಕುಂಬಳೆ: ಕುಸಿದು ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ನಿಧನರಾದರು. ಕುಂಬಳೆ ಕಂಚಿಕಟ್ಟೆ ರಾಮನಗರದ ರಮಾನಾಥ ಗಟ್ಟಿ (70) ನಿನ್ನೆ (ಮಂಗಳವಾರ) ರಾತ್ರಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಅಂತ್ಯ ಸಂಸ್ಕಾರ ಇಂದು ನಡೆಯಲಿದೆ.
ರಕ್ತದೊತ್ತಡ,ಮಧುಮೇಹ ರೋಗದಿಂದ ಬಳಲುತ್ತಿದ್ದ ರಮಾನಾಥ ಗಟ್ಟಿಯವರು ಒಂದು ವಾರದ ಹಿಂದೆ ಕುಸಿದು ಬಿದ್ದಿದ್ದರು. ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ರಮಾನಾಥ ಗಟ್ಟಿಯವರನ್ನು ಪೂರ್ವ ಸ್ಥಿತಿಗೆ ತರಲು ಅಸಾಧ್ಯವೆಂದು ಈ ಸಂದರ್ಭದಲ್ಲಿ ಡಾಕ್ಟರುಗಳು ಹೇಳಿದ್ದರು. ಅವರನ್ನು ಕೊಂಡು ಹೋಗುವಂತೆಯೂ, ಮನೆಗೆ ತಲುಪಿದಾಗ ಮಾಸ್ಕ್ ತೆಗೆಯುವಂತೆಯೂ ಮಾಸ್ಕ್ ತೆಗೆದಾಗ ಅವರು ಕೊನೆಯುಸಿರೆಳೆಯುವರೆಂದೂ ಹೇಳಿದ್ದರು. ಅದರಂತೆ ಮನೆಗೆ ತಂದಾಗ ನಾಡಿ ಮಿಡಿತ ಗಮನಕ್ಕೆ ಬಂತು. ಅದರಂತೆ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಮೃತರು ಪತ್ನಿ ರೂಪಾವತಿ, ಮಕ್ಕಳು, ಇತರರನ್ನು ಅಗಲಿದ್ದಾರೆ

0 Comments