ಯುವತಿಯನ್ನು ಪತ್ನಿ ಎಂದು ಹೇಳಿ ವಸತಿಗೃಹಕ್ಕೆ ಕೊಂಡೊಯ್ದು ಕೋಣೆ ಪಡೆದು ಕೊಲೆಗೈದ ಪ್ರಕರಣ ನಡೆದಿದೆ. ವಡಗರ ಒಂಜಿಯಂ ನಿವಾಸಿ ಅಸ್ಮಿನ್(38) ಕೊಲೆಗೀಡಾದ ಮಹಿಳೆ. ಕೊಲೆಗೆ ಸಂಬಂಧಿಸಿ ಇದೇ ವಸತಿಗೃಹದ ರಿಸಪ್ಷನಿಸ್ಟ್ ಜೋಬಿ ಜಾರ್ಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆಟ್ಟಿಂಗಲ್ ಗ್ರೀನ್ ಇನ್ ವಸತಿಗೃಹದಲ್ಲಿ ಈ ಘಟನೆ ನಡೆದಿದೆ.
ವಸತಿಗೃದ ಸಿಬಂದಿಯಾಗಿರುವ ಜೋಬಿ ಜಾರ್ಜ್, ಅಸ್ಮಿನ್ ಳನ್ನು ಕರೆತಂದು ಪತ್ನಿ ಎಂದು ಪರಿಚಯಿಸಿ ಬಾಡಿಗೆಗೆ ಕೋಣೆ ಪಡೆದಿದ್ದನು. ರಾತ್ರಿ 1.30 ಕ್ಕೆ ಮದ್ಯದ ಬಾಟಲಿಯಿಂದ ಚುಚ್ಚಿ ಅಸ್ಮಿನ್ ಳನ್ನು ಕೊಲೆ ಮಾಡಿ ಪರಾರೊಯಾಗಿದ್ದಾನೆ. ಬೆಳಗ್ಗೆ ಕೋಣೆಯ ಬಾಗಿಲು ತೆರೆಯದೇ ಇದ್ದಾಗ ಇತರ ಸಿಬಂದಿಗಳು ಬಲವಾಗಿ ಬಾಗಿಲು ತೆರೆದಿದ್ದು ಈ ವೇಳೆ ಅಸ್ಮಿನ್ ಹೆಣವಾಗಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಆಗಮಿಸಿ ವಸತಿಗೃಹದ ಸಿಸಿ ಕ್ಯಾಮರ ಪರಿಶೀಲಿಸಿದಾಗ ಜೋಬಿ ಜಾರ್ಜ್ ಪರಾರಿಯಾಗುತ್ತಿರುವ ದೃಶ್ಯ ಕಂಡು ಬಂತು. ಅದರಂತೆ ಆತನನ್ನು ಕೋಜಿಕ್ಕೋಡು ಬಳಿಯಿಂದ ಬಂಧಿಸಲಾಗಿದೆ. ಆದರೆ ಕೊಲೆ ನಡೆಸಲು ಕಾರಣವೇನು ಎಂದು ತಿಳಿದುಬಂದಿಲ್ಲ

0 Comments