ಕಾಞಂಗಾಡ್: ನಿವೃತ್ತ ಅಧ್ಯಾಪಕನ ಮನೆಯಿಂದ ಐದೂವರೆ ಪವನು ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಕುಟುಂಬದ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಳಿಕ್ಕರ ನಿವಾಸಿ ರವೀಂದ್ರ ಮಾಸ್ತರ್ ಅವರ ಮನೆಯಿಂದ ಕಳವು ನಡೆದಿತ್ತು. ಈ ಪ್ರಕರಣದಲ್ಲಿ ನೀಲೇಶ್ವರ ನಿವಾಸಿ ಚಾಲಕ ವಿನು(45) ನನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 17 ರಿಂದ 21 ರ ಮಧೈ ರವೀಂದ್ರನ್ ಮಾಸ್ತರ ಮನೆಯಲ್ಲಿ ಸೂಟ್ ಕೇಸಿನಲ್ಲಿ ಇಡಲಾಗಿದ್ದ 3 ಬಳೆ, 1 ಮಾಲೆ ಸಹಿತ ಐದೂವರೆ ಪವನು ಚಿನ್ನಭರಣ ಕಳವುಗೈಯ್ಯಲಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ರವೀಂದ್ರನ್ ಮಾಸ್ತರರ ವಾಹನದ ಚಾಲಕ ವಿನು ಮೇಲೆ ನಿಗಾ ಇಟ್ಟರು. ವಿನು ಆಡಂಬರ ಜೀವನ ನಡೆಸುತ್ತಿರುವುದನ್ನು ಕಂಡು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದು ರಿಮಾಂಡ್ ವಿಧಿಸಲಾಗಿದೆ

0 Comments