ತಿರುವನಂತಪುರಂ: ಶಬರಿಮಲೆಯ ಚಿನ್ನ ಕಳವುಗೈದ ಪ್ರಕರಣದಲ್ಲಿ ಓರ್ವ ದೇವಸ್ವಂ ಅಧಿಕಾರಿಯನ್ನು ಬಂಧಿಸಲಾಗಿದೆ. ಶಬರಿಮಲೆಯ ಮಾಜಿ ಅಡ್ಮೊನಿಸ್ಟ್ರೇ ಟಿವ್ ಆಲಪೀಸರ್ ಮುರಾರಿ ಬಾಬು ಬಂಧಿತ ಅಧಿಕಾರಿ. ಇದರೊಂದಿಗೆ ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಬಂಧಿತರ ಸಂಖೈ ಎರಡಕ್ಕೇರಿದೆ.
ಬಂಧಿತ ಮುರಾರಿ ಬಾಬು ಶಬರಿಮಲೆಯ ದಾಖಲೆಗಳಲ್ಲಿ ಚಿನ್ನ ಎಂಬುದರ ಬದಲು ತಾಮ್ರ ಎಂದು ನಮೂದಿಸಿ ನಕಲಿ ದಾಖಲೆ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ಆರೋಪಿಯನ್ನು ಬಂಧಿಸಿದೆ

0 Comments