ಕುಂಬಳೆ : ಮೊಗ್ರಾಲ್ ಸರಕಾರಿ ವೊಕೇಶನಲ್ ಉನ್ನತ ಪ್ರೌಢಶಾಲೆಯಲ್ಲಿ ಜರಗಿದ ಶಾಲಾಮಟ್ಟದ ಕಲೋತ್ಸವದ ಸಮಾರೋಪದ ಸಂದರ್ಭದಲ್ಲಿ ಘರ್ಷಣೆ ನಡೆದಿದ್ದು ಪೊಲೀಸರ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸ್ಥಳೀಯರು ಮಧ್ಯಸ್ಥಿಕೆವಹಿಸಿದ ಬಳಿಕವೂ ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನಲೆಯಲ್ಲಿ ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ಲಾಠಿಚಾರ್ಜ್ ನಡೆಸಿದ್ದು,ಇದರಿಂದಾಗಿ ಹಲವಾರು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಶಾಲೆ ಹಾಗೂ ಪರಿಸರದ ಪ್ರದೇಶಗಳಲ್ಲಿ ಗುಂಪುಗೂಡಿ ಘರ್ಷಣೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಗುರುವಾರ ಸಂಜೆ ಕಲೋತ್ಸವದ ಸಮಾರೋಪದ ವೇಳೆ ಗುಂಪು ಸೇರಿ ಘರ್ಷಣೆ ನಡೆಸಿದ ವಿದ್ಯಾರ್ಥಿಗಳೊಡನೆ ಇತರ ಶಾಲಾ ವಿದ್ಯಾರ್ಥಿಗಳು ಮತ್ತು ಪರಿಸರದ ಯುವಕರು ಜತೆ ಸೇರಿದುದೇ ಘರ್ಷಣೆ ವಿಪರೀತಕ್ಕೇರಲು ಕಾರಣ ಎಂದು ಪೋಲಿಸರು ತಿಳಿಸಿದ್ದಾರೆ. .
0 Comments