ಕಾಸರಗೋಡು: ಸ್ಕೂಟರ್ ಚಾಲನೆಯ ವೇಳೆ ಮಳೆಗಾಲದಲ್ಲಿ ನಿರ್ಮಾಣವಾದ ರಸ್ತೆ ಹೊಂಡಕ್ಕೆ ಬಿದ್ದ ಪರಿಣಾಮ ಯುವಕನೋರ್ವ ತನ್ನ ಬಲಕೈ ಕಳಕೊಂಡ ದಾರುಣ ಘಟನೆ ನಡೆದಿದೆ. ಚಾಲಕ ವೃತ್ತಿಯಲ್ಲಿರುವ ಮೇಲ್ಪರಂಬ ನಿವಾಸಿ ಪ್ರಕಾಶನ್ ಎಂಬವರ ಬಲಕೈ ಮಂಗಳೂರು ಆಸ್ಪತ್ರೆಯಲ್ಲಿ ಕತ್ತರಿಸಿ ತೆಗೆಯಲಾಯಿತು. ಅಗಸ್ಟ್ 30 ರಂದು ವೃತ್ತಿ ಮುಗಿಸಿ ಮನೆಗೆ ಹೋಗುತ್ತಿದ್ದಾಗ ರಾತ್ರಿ 8 ಗಂಟೆಗೆ ಚೆಮ್ನಾಡು ಪೆಟ್ರೋಲ್ ಪಂಪು ಬಳಿ ಇವರು ಚಲಾಯಿಸಿದ ಸ್ಕೂಟರ್ ಹೊಂಡಕ್ಕೆ ಬಿದ್ದಿತ್ತು. ಬಲಗೈಗೆ ಗಂಭೀರ ಗಾಯಗೊಂಡ ಪ್ರಕಾಶರನ್ನು ಪೊಲೀಸರು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಅಂದು ರಾತ್ರಿಯೇ ಕಾಸರಗೋಡು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿನ ಡಾಕ್ಟರುಗಳ ಆದೇಶದಂತೆ ಮರುದಿನ ಪ್ರಕಾಶನ್ ಮನೆಗೆ ಹಿಂತಿರುಗಿದರು. ಕ್ರಮೇಣ ಬಲಗೈಯಲ್ಲಿ ದುರ್ವಾಸನೆ ಬೀರತೊಡಗಿದಾಗ ಮಂಗಳೂರಿನ ತಜ್ಞ ವೈದ್ಯರಿಗೆ ತೋರಿಸಲಾಯಿತು. ಅಲ್ಲಿ ನಡೆದ ಪರೀಕ್ಷೆಯ ಫಲಿತಾಶದಂತೆ ಬಲಗೈ ಕತ್ತರಿಸಲು ಡಾಕ್ಟರುಗಳು ಸಲಹೆ ನೀಡಿದ್ದಾರೆ.
ಚಾಲಕ ವೃತ್ತಿಗೈಯುತ್ತಿದ್ದ ಪ್ರಕಾಶ್ ಕೈ ಕಳಕೊಂಡ ನಂತರ ದಿಕ್ಕು ತೋಚದಂತಾಗಿದ್ದಾರೆ.
0 Comments