ಮಂಜೇಶ್ವರ: ಮಿಂಜದ ಕುಳೂರು ಧೂಮಾವತಿ ದೈವಸ್ಥಾನ ಬಳಿಯ ನಿವಾಸಿ ಕೂಲಿ ಕಾರ್ಮಿಕ ಹರೀಶ್ (38) ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದ್ದಾರೆ. ಹಣಕಾಸು ಸಂಸ್ಥೆಯಲ್ಲಿ ಹಣ ಕಟ್ಟಲೆಂದು ಬೆಳಗ್ಗೆ 7.45 ಕ್ಕೆ ಮನೆಯಿಂದ ತೆರಳಿದ ಹರೀಶ್ ರ ಮೃತದೇಹ ಮನೆಯಿಂದ ಕೇವಲ 200 ಮೀಟರ್ ಅಂತರದಲ್ಲಿರುವ ಅಕೇಶಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪರಿಸರದ ನಿವಾಸಿಯೊಬ್ಬರಿಗೆ ಕಂಡು ಬಂತು. ಕೂಡಲೇ ಮನೆಯವರಿಗೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಲಾಯಿತು. ಬಳಿಕ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಮನೆಗೆ ತರಲಾಗಿದೆ. ಮನೆ ಪರಿಸರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿ. ಸಂಜೀವ ಎಂಬವರ ಪುತ್ರ ಹರೀಶ್, ತಾಯಿ: ಲಕ್ಷ್ಮಿ ಪತ್ನಿ: ಬೇಬಿ, ಮಕ್ಕಳಾದ ಯಜ್ಞ ಶ್ರೀ, ಲಿಖಿತ್ ಸಹೋದರರಾದ ಹರಿನಾಥ, ಗಿರೀಶ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ.
0 Comments