ಕುಂಬಳೆ: ಕಾಸರಗೋಡು ಬ್ಲಾಕ್ ಪಂಚಾಯತಿ ಕೇರಳೋತ್ಸವ ಭಾನುವಾರ ಮುಕ್ತಾಯ ಗೊಳ್ಳಲಿದೆ. ಅಕ್ಟೋಬರ್ 4 ರಿಂದ ಬ್ಲಾಕ್ ಪಂಚಾಯತಿಯ ವಿವಿಧ ಪ್ರದೇಶಗಳಲ್ಲಿ ಕಲೆ ಮತ್ತು ಕ್ರೀಡಾ ಕಾರ್ಯಕ್ರಮಗಳು ನಡೆಯುತ್ತಿವೆ. ಭಾನುವಾರ ಕುಂಬಳೆ ಜಿ.ಬಿ.ಎಸ್.ಬಿ.ಎಸ್. ಶಾಲೆಯಲ್ಲಿ ನಡೆಯಲಿರುವ ಕಲಾ ಸ್ಪರ್ಧೆ ಕಾರ್ಯಕ್ರಮಗಳನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಲಿದ್ದಾರೆ ಎಂದು ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಿಎ ಶೈಮಾ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟ ಮತ್ತು ಕಾಸರಗೋಡು ಡಿವೈಎಸ್ಪಿ ಸಿಬಿ ಥಾಮಸ್, ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್, ಕಲ್ಹಟ್ರ ಮಾಹಿನ್ ಹಾಜಿ, ನಿವೃತ್ತ ಹೆಚ್ಚುವರಿ ಎಸ್‌ಪಿ ಟಿ.ಪಿ. ರಂಜಿತ್, ಜಿಲ್ಲಾ ಪಂಚಾಯತಿ ಸದಸ್ಯರಾದ ಜಮೀಲಾ ಸಿದ್ದಿಕ್ ಮತ್ತು ಜಾಸ್ಮಿನ್ ಕಬೀರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕುಂಬಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸಮಿತಿ ಅಧ್ಯಕ್ಷ ಪಿ.ಎ. ಅಶ್ರಫ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಮೀಮಾ ಅನ್ಸಾರಿ, ಅಶ್ರಫ್ ಕಾರ್ಲೆ, ಸಕೀನಾ ಅಬ್ದುಲ್ಲ ಹಾಜಿ, ಬ್ಲಾಕ್ ಪಂಚಾಯತಿ ಸದಸ್ಯ ಬದರುಲ್ ಮುನೀರ್, ಸಿ.ವಿ. ಜೇಮ್ಸ್, ಹನೀಫ ಪಾರ, ಸುಕುಮಾರ ಕುದ್ರೆಪ್ಪಾಡಿ, ಕಲಾಭವನ ರಾಜು, ಜಮೀಲಾ ಅಹಮದ್, ಜಯಂತಿ, ಪ್ರೇಮಾ ಶೆಟ್ಟಿ, ಕೆ.ಎಂ. ಅಶ್ವಿನಿ ಮೊಳೆಯಾರ, ಸೀನತ್ ನಜೀರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನಾಸರ್ ಮೊಗ್ರಾಲ್, ಮುಜೀಬ್ ಕಂಬಾರು, ಬಿ.ಎ.ರಹಿಮಾನ್ ಆರಿಕ್ಕಾಡಿ, ನಿಸಾರ್ ಕುಳಂಗರ, ರಾಫಿ ಏರಿಯಾಲ್, ಮೊದಲಾದವರು ಉಪಸ್ಥಿತರಿರುವರು.
ರಾಜ್ಯದಲ್ಲೇ ಮೊದಲ ಬಾರಿಗೆ ಕಾಸರಗೋಡು ಬ್ಲಾಕ್ ಪಂಚಾಯತಿ ಇದೇ ಮೊದಲ ಬಾರಿಗೆ ಕೇರಳೋತ್ಸವದಲ್ಲಿ ಸಮಗ್ರ ಸಾಧನೆಗೈದ ತಂಡಕ್ಕೆ ಶಾಶ್ವತ ಟ್ರೋಫಿಗಳನ್ನು ಪ್ರಥಮ, ದ್ವಿತೀಯ ಬಹುಮಾನಿತ ತಂಡಕ್ಕೆ ನೀಡಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಸಕೀನಾ ಅಬ್ದುಲ್ಲ ಹಾಜಿ, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್, ಬ್ಲಾಕ್ ಪಂಚಾಯತಿ ಸದಸ್ಯರಾದ ಸಿ.ವಿ. ಜೇಮ್ಸ್ ಮತ್ತು ಹನೀಫ ಪಾರಾ ಉಪಸ್ಥಿತರಿದ್ದರು.
0 Comments