Ticker

6/recent/ticker-posts

Ad Code

ಜಪಾನ್ ಷೋಟ್ಟೋಕಾನ್ ಕರಾಟ್ಟೆ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ 40 ನೇ ವಾರ್ಷಿಕದ ಅಂಗವಾಗಿ ಕರಾಟ್ಟೆ ಸ್ಪರ್ದೆ


 ಕುಂಬಳೆ: ಜಪಾನ್ ಷೋಟ್ಟೋಕಾನ್ ಕರಾಟ್ಟೆ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ 40 ನೇ ವಾರ್ಷಿಕದ ಅಂಗವಾಗಿ ನಡೆಸಿದ ಕೇರಳ- ಕರ್ಣಾಟಕ ಓಪನ್ ಕರಾಟ್ಟೆ ಚಾಂಪಿಯನ್ಶಿಪ್ 2025 ಕುಂಬಳೆ ವ್ಯಾಪಾರ ಭವನ ಸಭಾಂಗಣದಲ್ಲಿ ಜರಗಿತು. ಕಾಸರಗೋಡು, ಕಣ್ಣೂರು, ತ್ರಿಶೂರ್ ಜಿಲ್ಲೆಗಳಿಂದ 50 ರಷ್ಡು ಆಯ್ದ ವಿದ್ಯಾರ್ಥಿಗಳು ಭಾಗವಹಿಸಿದರು.43 ಅಂಕಗಳೊಂದಿಗೆ ಕುನಿಲ್ ಎಜುಕೇಶನ್ ಟ್ರಸ್ಟ್ ಮುಟ್ಟಂ ಸಮಗ್ರ ಪ್ರಶಸ್ತಿ ಪಡೆದರು. 23 ಅಂಕಗಳೊಂದಿಗೆ ಕುಂಬಳೆ St ಮೋನಿಕಾ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ, ಕೊಕ್ಕಚ್ಚಾಲ ಕಾಮಿಲ್ ಇಂಗ್ಲಿಷ್ ಶಾಲೆ ತೃತೀಯ ಪ್ರಶಸ್ತಿ ಪಡೆದರು.

ಕುಂಬಳೆ ಗ್ರಾಮ ಪಂಚಾಯತು ಉಪಾಧ್ಯಕ್ಷ ನಾಸರ್ ಮೊಗ್ರಾಲು ಬಹುಮಾನ ವಿತರಿಸಿದರು. JSKA ಜಿಲ್ಲಾ ಚೀಫ್ ಇನ್ಸ್ಪೆಕ್ಟರ್  ವಿ.ಬಿ.ಸದಾನಂದನ್, ಸಹಾಯಕ ಆಫೀಸರ್ ಅಕ್ಷಯ್ ಕುಮಾರ್,  ತಾಜುದ್ದೀನ್ ಮೊಗ್ರಾಲು ಮೊದಲಾದವರು ಉಪಸ್ಥಿತರಿದ್ದರು. ಪಂದ್ಯಾಟದಲ್ಲಿ ಗೆಲುವು ಸಾಧಿಸಿದ ಮಕ್ಕಳು ನವಂಬರ್ 20 ರಂದು ನೀಲೇಶ್ವರದಲ್ಲಿ ನಡೆಯುವ ಜಿಲ್ಲಾ ಕರಾಟ್ಟೆ ಪಂದ್ಯಾಟದಲ್ಲಿ JSKA ಕಾಸರಗೋಡು ತಂಡದಲ್ಲಿ ಗುರುತಿಸಿಕೊಂಡು ಭಾಗವಹಿಸುವರು

Post a Comment

0 Comments