Ticker

6/recent/ticker-posts

Ad Code

ನೆರೆಮನೆಯ ಇಬ್ಬರು ಯುವಕರ ಮೃತದೇಹ ಗುಂಡು ತಗುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ,


 ಪಾಲಕ್ಕಾಡ್: ಇಲ್ಲಿನ ಕಲ್ಲಿಕೋಡ್ ಎಂಬಲ್ಲಿ ನೆರೆಮನೆಯವರಾದ ಇಬ್ಬರು ಯುವಕರ ಮೃತದೇಹ ಗುಂಡು ತಗುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮರುದುಂಕಾಡ್ ನಡುವೆ ನಿವಾಸಿಗಳಾದ ಬಿನು,ನಿತಿನ್ ಮೃತಪಟ್ಟವರು. ಇಂದು (ಮಂಗಳವಾರ) 3 ಗಂಟೆಯ ವೇಳೆ ಮೃತದೇಹ ಪತ್ತೆಯಾಗಿದೆ. ಮರುದುಂಕಾಡ್ ಶಾಲೆಯ ಪರಿಸರದ ರಸ್ತೆಯಲ್ಲಿ ಇವರ ಮೃತದೇಹ ಕಂಡು ಬಂದಿದೆ. ಮೃತದೇಹದ ಬಳಿ ಒಂದು ನಾಡಕೋವಿ ಸಹ‌ಪತ್ತೆಯಾಗಿದೆ. ನಿತಿನ್ ನನ್ನು ಗುಂಡಿಟ್ಟು ಕೊಲೆಗೈದ ನಂತರ ಬಿನು ಸ್ವತಃ ಗುಂಡಿಟ್ಟು ಆತ್ಮಹತ್ಯೆ ಮಾಡಿರಬೇಕು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಗ್ರಹಿಸುತ್ತಿದ್ದಾರೆ

Post a Comment

0 Comments