Ticker

6/recent/ticker-posts

Ad Code

ದೈವನರ್ತಕನ ಮೃತದೇಹ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಕಣ್ಣೂರು:  ಪ್ರಮುಖ ದೈವನರ್ತಕನ ಮೃತದೇಹ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಶ್ಶಿನಿಕಡವ್ ನಾಣಿಶೇರಿ ಕೋಳ್ ತುರುತ್ತಿ ಕುಡುಕ್ಕ ವೀಟಿಲ್  ಸೂರಜ್ ಅವರ ಪುತ್ರ ಪಿ.ಕೆ.ಅಶ್ವಂತ್(25) ಮೃತಪಟ್ಟವರು. ಕಣ್ಣೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪೊಡಿಕುಂಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. 6 ತಿಂಗಳ ಹಿಂದೆಯಷ್ಟೆ ಅಶ್ವಂತ್ ಸಹೋದರ ಅದ್ವೈತ್ ಜತೆ ಬಾಡಿಗೆ ಮನೆಗೆ ಬಂದಿದ್ದರು. ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ.  ಮೃತರು ತಂದೆ, ತಾಯಿ ಜಿಶ, ಸಹೋದರ ಅದ್ವೈತ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments