ಪೆರ್ಲ : ಎಣ್ಮಕಜೆ ಪಂಚಾಯತಿನ ಬಜಕೂಡ್ಲು 16ನೇ ವಾರ್ಡ್ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೇ ಇಲ್ಲಿನ ಮುಂದಿನ ಚುನಾವಣೆಯ ಗೆಲುವಿಗೆ ಮುನ್ನುಡಿಯಾಗಲಿದೆ ಎಂದು ಸಿಪಿಎಂ ಕುಂಬಳೆ ಎರಿಯ ಕಾರ್ಯದರ್ಶಿ ಸಿ.ಎ.ಸುಬೈರ್ ಅಭಿಪ್ರಾಯಪಟ್ಟರು. ಇಲ್ಲಿನ ವಾರ್ಡ್ ಸದಸ್ಯರ ಹಾಗೂ ಸಿಪಿಎಂ ಪಕ್ಷದ ನೇತೃತ್ವದಲ್ಲಿ ಸರಕಾರದ ವಿವಿಧ ಯೋಜನೆಗಳಲ್ಲದೆ ಪಂಚಾಯತಿನ ಸವಲತ್ತುಗಳನ್ನು ಅರ್ಹರನ್ನು ಗುರುತಿಸಿ ನೀಡಿರುವುದೇ ಪಕ್ಷದ ಬಲಿಷ್ಠತೆಗೆ ಮುಖ್ಯ ಕಾರಣವಾಗಲಿದೆ ಎಂದು ಅವರು ತಿಳಿಸಿದರು.
ಅವರು ಬೇಂಗಪದವಿನಲ್ಲಿ ನಡೆದ ಸಿಪಿಐಎಂ ಚುನಾವಣಾ ಪೂರ್ವ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಿಪಿಎಂ ಎರಿಯ ಸಮಿತಿ ಸದಸ್ಯ ರಘದೇವ ಮಾಸ್ತರ್ ,ಸಿಪಿಎಂ ಪಂಚಾಯತ್ ಸಮಿತಿ ಕಾರ್ಯದರ್ಶಿ ಸುಧಾಕರ ಮಾಸ್ತರ್,ಎಣ್ಮಕಜೆ ಲೋಕಲ್ ಸಮಿತಿ ಕಾರ್ಯದರ್ಶಿ ವಿನೋದ್, ಲೋಕಲ್ ಸಮಿತಿ ಸದಸ್ಯರಾದ ಸೌದಭಿ ಹನೀಫ್ ,ವಿಶ್ವರಾಜ್, ಪುಷ್ಪಾ, ಬ್ರಾಂಚ್ ಕಾರ್ಯದರ್ಶಿ ಉದಯ,ಹರೀಶ್ ಮೊದಲಾದವರು ಪಾಲ್ಗೊಂಡಿದ್ದರು.
0 Comments