ಕಾಸರಗೋಡು: ಕಾಸರಗೋಡು ಜಿಲ್ಲಾ ಬಂಟರ ಸಂಘವು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಸಹಯೋಗದೊಂದಿಗೆ ಪ್ರತಿ ವರ್ಷ ನೀಡಲಾಗುತ್ತಿರುವ ವಿದ್ಯಾಭ್ಯಾಸ ಸಹಾಯಧನ ವಿತರಣೆ ಸಮಾರಂಭವು ಉಪ್ಪಳ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಜರಗಿತು. ಸಮಾರಂಭವನ್ನು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಅಡ್ವೋಕೇಟ್ ಬಿ ಸುಬ್ಬಯ ರೈ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ರವೀಂದ್ರ ಆಳ್ವ ಕಿದೂರು ಗುತ್ತು, ಮಧುಕರ್ ರೈ ಕೊರೆಕಾನ ಮುಖ್ಯ ಅತಿಥಿಗಳಾಗಿದ್ದರು. ಕಾಸರಗೋಡು ಜಿಲ್ಲಾ ಬಂಟರ ಸಂಘದ. ಮಂಜೇಶ್ವರ ಫಿರ್ಕಾ ಬಂಟರ ಸಂಘದ ಪ್ರಭಾರ ಅಧ್ಯಕ್ಷೆ ರಮಾರಂಜಿನಿ ಭಂಡಾರಿ, ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ, ಕುಚ್ಚಿಕ್ಕಾಡು, ಕುಂಬಳೆ ಫಿರ್ಕಾ ಬಂಟ್ಸ್ ಸರ್ವಿಸ್ ಸೊಸೈಟಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು.ಮಾತೃ ಸಂಘದ ಜಿಲ್ಲಾ ಸಂಚಾಲಕ ಸುದೀರ್ ಕುಮಾರ್ ರೈ, ಜಿಲ್ಲಾ ಸಂಘದ ಸದಸ್ಯರು ಉಪಸ್ಥಿತರಿದ್ದರು ವಿದ್ಯಾರ್ಥಿ ಸಹಾಯಧನ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ನಾಡೋಜ ಡಾ ಕಯ್ಯಾರ ಪ್ರತಿಭಾ ಪುರಸ್ಕಾರಗಳಿಗೆ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಲಿಯಾಣ ಜಗದೀಶ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅನ್ನಪೂರ್ಣ ರೈ ಕಿದೂರು ಪ್ರಾರ್ಥನೆ ಹಾಡಿದರು. ಜಿಲ್ಲಾ ಸಂಘದ ಕಾರ್ಯದರ್ಶಿ ಮೋಹನ್ ರೈ ಕಯ್ಯಾರ್ ಸ್ವಾಗತಿಸಿ ಚಿದಾನಂದ ಆಳ್ವ ಮಂಜಕೊಟ್ಟಿಗೆ ವಂದಿಸಿದರು.
0 Comments