Ticker

6/recent/ticker-posts

Ad Code

ಹಿರಿಯ ಕಾಂಗ್ರೆಸ್ ನೇತಾರ ಐತ್ತಪ್ಪ ಚೆನ್ನೆಗುಳಿ ನಿಧನ

 


ಬದಿಯಡ್ಕ : ಹಿರಿಯ ಕಾಂಗ್ರೆಸ್ ನೇತಾರ ಹಾಗೂ ಬದಿಯಡ್ಕ ಪಂ.ಪರಿಶಿಷ್ಟ ಜಾತಿ ಸರ್ವೀಸ್ ಸಹಕರಣ ಸಂಘದ ಮಾಜಿ ಅಧ್ಯಕ್ಷ ಐತ್ತಪ್ಪ ಚೆನ್ನೆಗುಳಿ (76) ಅಲ್ಪ ಕಾಲದ ಅಸೌಖ್ಯದಿಂದ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ 11.30 ಗಂಟೆಗೆ ನಿಧನರಾದರು. ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಸ್ಟಾಫ್ ನರ್ಸ್ ಆಗಿ ಕಾಯಕ ನಿರ್ವಹಿಸಿದ್ದ ಇವರು ನಿವೃತ್ತರಾದ ಬಳಿಕ ಪೂರ್ಣ ಪ್ರಮಾಣದಲ್ಲಿ ರಾಜಕೀಯ ರಂಗಕ್ಕಿಳಿದಿದ್ದರು. ಕಾಸರಗೋಡು ಜಿಲ್ಲಾ ದಲಿತ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ, ಬದಿಯಡ್ಕ ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ಮೊದಲಾದ ಸ್ಥಾನವಹಿಸಿದ್ದರು. ಪತ್ನಿ ಸುಂದರಿ ಈ ಹಿಂದೆಯೇ ತೀರಿಕೊಂಡಿದ್ದರು. ಇವರು ಮಕ್ಕಳಾದ  ಶೀಲಾ ,ರಶ್ಮಿ, ಆಶಾಲತ, ಶಿಲ್ಪ, ಅಳಿಯಂದಿರಾದ ಜನಾರ್ಧನ,ಮಧು, ಶೈಜು,ವಿಜಯ್ ಮೊದಲಾದವರನ್ನಗಲಿದ್ದಾರೆ. ಬದಿಯಡ್ಕ ಪಂ.ಪರಿಶಿಷ್ಟ ಜಾತಿ ಸಹಕಾರಿ ಸಂಘ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Post a Comment

0 Comments