ಕುಂಬಳೆ : ಅನಂತಪುರ ಪ್ಲೈವುಡ್ ಪ್ಯಾಕ್ಟರಿಯೊಂದರಲ್ಲಿ ಬಾಯ್ಲಾರ್ ಸ್ಪೋಟವಾಗಿ ಓರ್ವ ಮೃತಪಟ್ಟು ಹಲವರಿಗೆ ಗಾಯಗಳಾಗಿದೆ ಎಂದು ಪ್ರಾಥಮಿಕ ವರದಿ. ಇಂದು (ಸೋಮವಾರ) ಸುಮಾರು ಗಂಟೆ 7ರಿಂದ 7.30ರೊಳಗೆ ನಡೆದ ದುರ್ಘಟನೆಯಲ್ಲಿ ಅಸ್ಸಾಂ ರಾಜ್ಯ ನಿವಾಸಿ ಕಾರ್ಮಿಕನಾದ ನಜೀರುಲ್ ಆಲಿ (20) ಮೃತಪಟ್ಟಿದ್ದಾರೆ.ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಅನಂತಪುರ ಬಳಿಯ ಕಣ್ಣೂರು ಕುನ್ನಿಲ್ ಸಮೀಪದ ಡೆಕ್ಕೂರು ಪ್ಲೈವುಡ್ ಫ್ಯಾಕ್ಟರಿಯಲ್ಲಿನ ಬಾಯ್ಲರ್ ಸ್ಪೋಟಗೊಂಡಿದ್ದು ವಿವಿದೆಡೆ ಬೆಂಕಿ ಹತ್ತಿಕೊಂಡಿದೆ. 300 ರಷ್ಟು ಕಾರ್ಮಿಕರು ಸ್ಪೋಟ ವೇಳೆ ಸ್ಥಳದಲ್ಲಿದ್ದರು.
ಇಲ್ಲಿನ ಪೆರಾಲ್ ಕಣ್ಣೂರು,ಸಿದ್ದಿಬಯಲು ಸಮೀಪದವರೆಗೆ ಇದರ ಅಪಾಯ ಸಂಭವಿಸಿದೆ. ಈ ಬಗ್ಗೆ ಅಗ್ನಿಶಾಮಕ ದಳ ಸಮೇತ ಹಲವರು ಪರಿಸ್ಥಿತಿ ನಿಯಂತ್ರಣದಲ್ಲಿ ತೊಡಗಿದ್ದಾರೆ. ಈ ಭಾಗಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದೆ. ದುರ್ಘಟನೆಯಲ್ಲಿ ಹೆಚ್ಚಿನ ಪ್ರಾಣಾಪಾಯ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.


0 Comments