Ticker

6/recent/ticker-posts

Ad Code

ಮನೆಯೊಳಗೆ ಹಾಗೂ ಕಾರಿನಲ್ಲಿ ಬಚ್ಚಿಟ್ಟಿದ್ದ 11 ಕಿಲೊ ಗಾಂಜಾ ವಶಪಡಿಸಿದ ಎಕ್ಸೈಸ್ ಅಧಿಕಾರಿಗಳು, ಕುಬಣೂರು ನಿವಾಸಿಯ ಸೆರೆ


 ಕುಂಬಳೆ: 11 ಕಿಲೊ ಗಾಂಜಾ ಸಹಿತ ಓರ್ವನನ್ನು ಎಕ್ಸೈಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕುಬಣೂರು ಕಾಡಮೂಲ‌ ನಿವಾಸಿ ಮೊಯ್ದೀನ್ ಶಬೀರ್(39) ಬಂಧಿತ ಆರೋಪಿ. ನಿನ್ನೆ (ಸೋಮವಾರ) ಎಕ್ಸೈಸ್ ಇನ್ಸ್ಪೆಕ್ಟರ್ ವಿ.ವಿಷ್ಣುಪ್ರಕಾಶ್  ನೇತೃತ್ವದಲ್ಲಿ ‌ನಡೆದ ಕಾರ್ಯಾಚರಣೆಯಲ್ಲಿ ಮನೆಯ ಮಲಗುವ ಕೋಣೆಯಿಂದ 5.269 ಕಿಲೊ, ಅಂಗಳದಲ್ಲಿ ನಿಲ್ಲಿಸಿದ್ದ ಕಾರಿನೊಳಗಿನಿಂದ 6.5 ಕಿಲೊ ಗಾಂಜಾ ವಶಪಡಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರಿಪಡಿಸಲಾಯಿತು. ಎಕ್ಸೈಸ್ ಅಧಿಕಾರಿಗಳಾದ ಸಿ.ಕೆ.ವಿ.ಸುರೇಶ್, ಅಜೀಶ್.ಸಿ, ಪ್ರಜಿತ್.ಕೆ.ಆರ್, ಸೋನು ಸೆಬಾಸ್ಟಿಯನ್, ಶಿಜಿನ್, ಧನ್ಯ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments