ಕುಂಬಳೆ: ಅನಂತಪುರದ ಕೈಗಾರಿಕಾ ಪ್ರಾಂಗಣದಲ್ಲಿ ಪ್ಲೈವುಡ್ ಪ್ಯಾಕ್ಟರಿಯಲ್ಲಿ ನಡೆದ ಬಾಯ್ಲರ್ ಸ್ಪೋಟದ ಬಗ್ಗೆ ಸಮಗ್ರ ತನಿಖೆ ನಡೆಸಲು ಜಿಲ್ಲಾಧಿಕಾರಿ ಕೆ.ಇಂಬಶೇಖರನ್ ಆದೇಶ ನೀಡಿದ್ದಾರೆ.ಇದಕ್ಕೆ ಸಂಬಂಧಪಟ್ಟಂತೆ ರಾಸಾಯನಿಕ ತಜ್ಞರು ಆಗಮಿಸಿ ಮಾಹಿತಿ ಕಲೆ ಹಾಕಲು ಆದೇಶಿಸಲಾಗಿದೆ.
ಎರ್ನಾಕುಳಂನ ಫ್ಯಾಕ್ಟರೀಸ್ ಅಂಡ್ ಬಾಯ್ಲರ್ ಇಲಾಖೆಯು ತನಿಖೆ ನಡೆಸಲಿದೆ. ತನಿಖೆಯ ವರದಿ ಲಭಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.
ಅನಂತಪುರ ಡೆಕೋರ್ ಪವರ್ ಯುನಿಟ್ ನಲ್ಲಿ ನಿನ್ನೆ (ಸೋಮವಾರ) ಸಾಯಂಕಾಲ ನಡೆದ ಸ್ಪೋಟದಲ್ಲಿ ಗಾಯಗೊಂಡ 9 ಮಂದಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸ್ಥಿತಿ ಚಿಂತಾಜನಕವಾಗಿದೆಯೆಂದು ತಿಳಿದು ಬಂದಿದೆ. ಸ್ಪೋಟದಲ್ಲಿ ಮೃತಪಟ್ಟ ಅಸ್ಸಾಂ ನಿವಾಸಿ ನಜೀರುಲ್ ಅಲಿ(20) ಯ ಮೃತದೇಹದ ಪೋಸ್ಟ್ ಮಾರ್ಟಂ ಇಂದು ನಡೆಯಲಿದೆ.
ಸ್ಪೋಟ ನಡೆದ ಪ್ಲೈವುಡ್ ಪ್ಯಾಕ್ಟರಿಯ ಸುತ್ತಮುತ್ತ ಪೊಲೀಸರು ಭಿಗಿ ಭದ್ರತೆ ಏರ್ಪಡಿಸಿದ್ದಾರೆ.



0 Comments