ಬೆಂಗಳೂರು: ಬಂಗಾಳ ಸಮುದ್ರದಲ್ಲಿ ಉದ್ಭವಿಸಿರುವ ಮೋನ್ ಥಾ ಚಂಡಮಾರುತ ಇಂದು (ಮಂಗಳವಾರ) ದಡಕ್ಕೆ ಅಪ್ಪಳಿಸಲಿದೆ. ಇಂದು ಸಾಯಂಕಾಲ ಆಂದ್ರಪ್ರದೇಶದ ಕಾಕಿನಾಡ ಬಳಿಯ ಪಚ್ಚಲಿಪಳ್ಳ ಪರಿಸರದಲ್ಲಿ 100 ಕಿ.ಮೀಟರ್ ವೇಗದಲ್ಲಿ ಚಂಡಮಾರುತ ದಡಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಆಂದ್ರಪ್ರದೇಶ, ಒರಿಸ್ಸಾ ರಾಜ್ಯಗಳಲ್ಲಿ ಭಾರೀ ಮುಂಜಾಗ್ರತೆ ಏರ್ಪಡಿಸಲಾಗಿದೆ. ಈ ಮೂರು ರಾಜ್ಯಗಳಲ್ಲಿ ಇಂದು ಶಿಕ್ಷಣ ಕೇಂದ್ರಗಳಿಗೆ ರಜೆ ಸಾರಲಾಗಿದೆ. ಆಂಧ್ರಪ್ರದೇಶದ 23 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಅತವಾ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವಿವಿದೆಡೆ ತಾತ್ಕಾಲಿಕ ಹೆಲಿಪಾಡ್ ನಿರ್ಮಿಸಲಾಗಿದ್ದು ತುರ್ತು ಅಗತ್ಯಕ್ಕಾಗಿ ಬಳಸುವ ಉದ್ದೇಶ ಹೊಂದಿದೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
ಮೋನ್ ರಾ ಚಂಡಮಾರುತವು ಕೇಳದಲ್ಲೂ ಹಾನಿ ಎಸಗಲಿದೆ. ಈಗಾಗಲೇ ಹವಾಮಾನ ಇಲಾಖೆಯು ದಕ್ಷಿಣದ 7 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಿದೆ. ತಿರುವನಂತಪುರಂನಿಂದ ಎರ್ನಾಕುಲಂ ವರೆಗೆ ಎಲ್ಲೋ ಅಲರ್ಟ್ ಆಗಿರುತ್ತದೆ.ಉಳಿದ ಜಿಲ್ಲೆಗಳಲ್ಲಿಯೂ ಮಳೆ ಸಾಧ್ಯತೆಯಿದೆ

0 Comments