Ticker

6/recent/ticker-posts

Ad Code

ಪಿ.ಎಂ.ಶ್ರೀ ಯೋಜನೆಗೆ ರಾಜ್ಯ ಸರಕಾರದ ಸಹಿ ವಿರುದ್ದ ಸಿಪಿಐ ಪ್ರತಿಭಟನೆ; ಸಚಿವ ಸಂಪುಟ ಸಭೆಗೆ ಭಾಗವಹಿಸದಿರಲು ನಿರ್ದಾರ


 ತಿರುವನಂತಪುರಂ: ಕೇಂದ್ರ ಶಿಕ್ಷಣ ಇಲಾಖೆ ಸಿದ್ದಪಡಿಸಿದ PM SRI ಯೋಜನೆಯಲ್ಲಿ ರಾಜ್ಯ ಸರಕಾರ ಸಹಿ ಹಾಕಿದ ವಿಷಯವೀಗ ಎಡರಂಗದಲ್ಲಿ ಬಿರುಕು ಮೂಡಲು ಕಾರಣವಾಗಿದೆ.  ಎಡರಂಗ ಸರಕಾರದ ಘಟಕ ಪಕ್ಷವಾದ ಸಿಪಿಐ ಈ ಯೋಜನೆಯ ವಿರುದ್ದ ಪ್ರತಿಭಟನೆ ಆರಂಭಿಸಿದೆ. ಇದರ ಮೊದಲ ಹಂತವಾಗಿ ಬುದವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟದಿಂದ ಸಿಪಿಐ ಸಚಿವರುಗಳು ದೂರವುಳಿಯಲಿದ್ದಾರೆ. ಸಿಪಿಐ ಸಚಿವರುಗಳಾದ ಕೆ.ರಾಜನ್, ಪಿ.ಪ್ರಸಾದ್, ಜಿ.ಆರ್.ಅನಿಲ್, ಚಿಂಜುರಾಣಿ ಎಂಬಿವರು ಸಚಿವ ಸಂಪುಟದಲ್ಲಿ ಭಾಗವಹಿಸಲಾರರು. ಸಿಪಿಐಯ ಮುಂದಿನ ನಡೆಯ ಬಗ್ಗೆ ನವಂಬರ್ 4 ರಂದು ನಡೆಯುವ ಪಕ್ಷದ ರಾಜ್ಯ ಕೌನ್ಸಿಲ್ ನಿರ್ದರಿಸಲಿದೆ.

    ಕೇಂದ್ರ ಸರಕಾರದ PM SRI ಯೋಜನೆಯಲ್ಲಿ ಸಹಿ ಹಾಕಬಾರದು ಎಂದು ಸಿಪಿಐ  ಒತ್ತಾಯಿಸಿತ್ತು. ಆದರೆ ಸಿಪಿಐಯ ಒತ್ತಾಯವನ್ನು ಕಡೆಗಣಿಸಿ ರಾಜ್ಯ ಸರಕಾರ ಯೋಜನೆಯ ಒಡಂಬಡಿಕೆಗೆ ಸಹಿ ಹಾಕಿದೆ.

ಸಿಪಿಐ ಪ್ರತಿಭಟನೆ ಕೊನೆಗೊಳಿಸಲು ಸ್ವತಃ ಮುಖ್ಯಮಂತ್ರಿ ‌ಪಿಣರಾಯಿ ವಿಜಯನ್ ಅವರೇ ಕಣಕ್ಕಿಳಿದಿದ್ದರು. ಪಿಣರಾಯಿ ಅವರು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಅವರ ಜತೆ ಸುದೀರ್ಘ ಮಾತುಕತೆ ನಡೆಸಿದ್ದರು.

Post a Comment

0 Comments