ವರ್ಕಾಡಿ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಮತ್ತು ವರ್ಕಾಡಿ ಪಂಚಾಯತ್ ನೇತೃತ್ವ ಸಮಿತಿ ವತಿಯಿಂದ ನಾಟಕ ಗರಡಿ ಎಂಬ ಅಭಿನಯ ತರಬೇತಿ ಕಾರ್ಯಕ್ರಮವು ಪಾವಳದಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ಕವಿ ಸಾಹಿತಿ ಚೇತನ್ ವರ್ಕಾಡಿ ನೆರವೇರಿಸಿದರು.
ಮಂಜೇಶ್ವರ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕಿಶೋರ್ ಕುಮಾರ್ ಪಾವಳರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಂಜೇಶ್ವರ ಲೈಬ್ರರಿ ಕೌನ್ಸಿಲ್ ನ ಸದಸ್ಯರಾದ ಸುಧಾಕರ್ ಕಲ್ಲೂರು, ಸಂತೋಷ್ ಪ್ರೆಂಡ್ಸ್ ಕ್ಲಬ್ ಲೈಬ್ರರಿಯ ಅಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ ಪಾವಳ, ಕವಿ-ಸಾಹಿತಿಯಾದ ರವೀಂದ್ರ ಕುಲಾಲ್ ವರ್ಕಾಡಿ ಮತ್ತು ಪ್ರೇರಣ ಗ್ರಂಥಾಲಯ ಗುವೆದಪಡ್ಪುನ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ,E. M. S ಲೈಬ್ರರಿಯ ಗ್ರಂಥಪಾಲಕಿ ಜನನಿ,ಲಿಖಿತ್ ರಾಜ್, ಅಶ್ವಿನಿ,ಕವಿತಾ ಮೊದಲಾದವರು ಉಪಸ್ಥಿತರಿದ್ದರು. ವಿಜಯ್ ಕುಮಾರ್ ಪಾವಳ ಸ್ವಾಗತಿಸಿ SFC ಗ್ರಂಥಾಲಯದ ಗ್ರಂಥಪಾಲಕ ಲೋಕೇಶ್ ಧನ್ಯವಾದವಿತ್ತರು.
ನಂತರ ವಿಜಯ್ ಕುಮಾರ್ ಪಾವಳ ನಾಟಕ ಗರಡಿಯ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳಿಗೆ ನಾಟಕದ ನವರಸ ಅಭಿನಯಗಳ ತರಬೇತಿ ನೀಡಿದರು.ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

0 Comments