Ticker

6/recent/ticker-posts

Ad Code

ನಿವೃತ್ತ ಗ್ರಾಮಾಧಿಕಾರಿ, ಸಾಹಿತ್ಯ ಸಾಂಸ್ಕೃತಿಕ ,ಸಾಮಾಜಿಕ ರಂಗದ ಪ್ರೋತ್ಸಾಹಕ ಕೃಷ್ಣ ಡಿ.ಬೇಳ ಹೃದಯಾಘಾತದಿಂದ ನಿಧನ

 


ನೀರ್ಚಾಲು :  ನಿವೃತ್ತ ಗ್ರಾಮಾಧಿಕಾರಿ, ಸಾಹಿತ್ಯ ಸಾಂಸ್ಕೃತಿಕ ,ಸಾಮಾಜಿಕ ರಂಗದ ಪ್ರೋತ್ಸಾಹಕ  ದರ್ಬೆತ್ತಡ್ಕ ನಿವಾಸಿ  ಕೃಷ್ಣ ಡಿ.ಬೇಳ (77) ರವಿವಾರ ರಾತ್ರಿ  ಹೃದಯಾಘಾತದಿಂದ ಸ್ವಗೃಹದಲ್ಲಿ  ನಿಧನರಾದರು. ಕುಂಬ್ಡಾಜೆ,ಬೆಳ್ಳೂರು, ಬದಿಯಡ್ಕ , ನೀರ್ಚಾಲು ,ಕಾಸರಗೋಡು ಮೊದಲಾದೆಡೆ ಕಂದಾಯ ಇಲಾಖೆಯಲ್ಲಿ ಗ್ರಾಮಾಧಿಕಾರಿ ಹಾಗೂ ಉನ್ನತ ಉದ್ಯೋಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿ ನೀರ್ಚಾಲಿನಲ್ಲಿ ಖಾಸಗೀಯಾಗಿ ಜನ ಸೇವಾ ಕಚೇರಿ ಸ್ಥಾಪಿಸಿ ಕಾರ್ಯ ನಿರತರಾಗಿದ್ದರು.  ಇವರ ಪತ್ನಿ ಸುಮಾರು ಹತ್ತು ವರ್ಷಗಳ ಹಿಂದೆ ನಿಧನರಾಗಿದ್ದಾರೆ‌. ಮೃತರು ಮಕ್ಕಳಾದ ಅಶ್ವಿನ್ ರಾಜ್  ( ಯುವ ವಿಜ್ಞಾನಿ} , ಆಶಾ ಕಿರಣ (ಉಪನ್ಯಾಸಕಿ), ಉಷಾ ಕಿರಣ (ಅಧ್ಯಾಪಕಿ), ಅಳಿಯ ಗೋಪಾಲಕೃಷ್ಣ ಎಂಬಿವರನ್ನಗಲಿದ್ದಾರೆ. ಅಂಬೇಡ್ಕರ್ ವಿಚಾರ ವೇದಿಕೆ,ಸಮತಾ ಸಾಹಿತ್ಯ ವೇದಿಕೆ, ಸವಿ ಹೃದಯದ ಕವಿ ಮಿತ್ರರು,ಹಿರಿಯ ನಾಗರಿಕ ವೇದಿಕೆ ಮೊದಲಾದ ಸಂಘಟನೆಗಳ ಮೂಲಕ ಸಾಹಿತ್ಯ ಸಾಂಸ್ಕೃತಿಕ,ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಇವರು ಹಲವು ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಮಹತ್ತರವಾದ ಪಾತ್ರವಹಿಸಿದ್ದರು. ಇವರ ನಿಧನ ಸಾಹಿತ್ಯ ಸಾಂಸ್ಕೃತಿಕ ವಲಯದಲಿ ತಲ್ಲಣ ಸೃಷ್ಟಿಸಿದೆ.

Post a Comment

0 Comments