ಜ್ವರದಿಂದಾಗಿ ತಂದೆ ತಾಯಿಯ ಜತೆ ಆಸ್ಪತ್ರೆಗೆ ಬಂದಿದ್ದ 3 ವರ್ಷದ ಬಾಲಕಿ ಡಾಕ್ಟರನ್ನು ಕಾಣಲು ಸರದಿ ಸಾಲಲ್ಲಿ ನಿಂತಿದ್ದ ವೇಳೆ ಮೃತಪಟ್ಟ ಘಟನೆ ನಡೆದಿದೆ. ನಿಲಂಬೂರು ಆದಿವಾಸಿ ಊರಿನ ಅಜಿತ್-ಸೌಮ್ಯ ದಂಪತಿಯ ಪುತ್ರಿ ಸನೋಮಿಯ(3) ಮೃತಪಟ್ಟವರು. ಇಂದು (ಗುರುವಾರ) ಬೆಳಗ್ಗೆ 10 ಗಂಟೆಯ ವೇಳೆ ಈ ಘಟನೆ ನಡೆದಿದೆ.
ಮಗುವಿಗೆ ಜ್ವರ, ವಾಂತಿ ಹಿನ್ನೆಲೆಯಲ್ಲಿ ನಿಲಂಬೂರು ಜಿಲ್ಲಾ ಆಸ್ಪತ್ರೆಗೆ ತರಲಾಗಿತ್ತು. ಇವರ ಊರಿಗೆ ಬಸ್ ಸೌಕರ್ಯ ಇಲ್ಲದ ಕಾರಣ ಜೀಪು ಸಿಕ್ಕಾಗ ತಡವಾಗಿದ್ದು ಇದುವೇ ಮಗು ಸಾವನ್ನಪ್ಪಲು ಕಾರಣವೆಂದು ಹೇಳಲಾಗುತ್ತಿದೆ. ಆಸ್ಪತ್ರೆಗೆ ತಲುಪಿದಾಗ ಡಾಕ್ಟರ್ ಕೋಣೆಯ ಮುಂದೆ ರೋಗಿಗಳ ಉದ್ದದ ಸಾಲು ಇತ್ತು. ಈ ಸಾಲಲ್ಲಿ ನಿಂತಿದ್ದಾಗ ಮಗು ಮೂರ್ಛಾವಸ್ಥೆಗೆ ಹೋಗಿದ್ದು ಕೂಡಲೇ ಡಾಕ್ಟರ್ ಬಂದು ತಪಾಸಣೆ ಮಾಡಿದಾಗ ಮೃತಪಟ್ಟಿರುವುದು ದೃಡಪಟ್ಟಿದೆ
 
 

 
 
 
 
 
 
 
 
 
 
 
 
 
 
 
 
 
 
 
 
0 Comments