Ticker

6/recent/ticker-posts

Ad Code

ಆರು ವರ್ಷದ ಬಾಲಕಿಗೆ ಅನ್ನಾಹಾರ ನೀಡದೆ ಕಿರುಕುಳ ಕೊಟ್ಟು ಕೊಲೆ; ತಂದೆ ಹಾಗೂ ಮಲತಾಯಿಗೆ ಜೀವಾವಧಿ ಶಿಕ್ಷೆ, ತಲಾ 2 ಲಕ್ಷ ರೂ.ದಂಡ


 ಕೋಜಿಕ್ಕೋಡು: 6 ವರ್ಷದ ಬಾಲಕಿಗೆ ಅನ್ನ ನೀಡದೆ ದೈಹಿಕ ಕಿರುಕುಳ ನೀಡಿ ಕೊಲೆಗೈದ ಪ್ರಕರಣದಲ್ಲಿ ತಂದೆ ಹಾಗೂ ಮಲತಾಯಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ಹಾಗೂ ತಲಾ 2 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ. ಕೋಜಿಕ್ಕೋಡು  ನಿವಾಸಿ  ಅತಿಥಿ ನಂಬೂದಿರಿ (6) ಮೃತಪಟ್ಟ ಪ್ರಕರಣದಲ್ಲಿ ಆಕೆಯ ತಂದೆ ಸುಬ್ ನಂಬೂದಿರಿ, ಮಲತಾಯಿ ದೇವಿಕ ಎಂಬಿವರಿಗೆ ಈ ಶಿಕ್ಷೆ ನೀಡಿದೆ.

    2013 ಎಪ್ರಿಲ್ 29 ರಂದು ಅತಿಥಿ ನಂಬೂದಿರಿ ಮೃತಪಟ್ಟಿದ್ದಳು. ಈಕೆಯ ಮೃತದೇಹದ ಪೋಸ್ಟ್ ಮಾರ್ಟಂ ನಡೆಸಿದಾಗ ಹಲವು ದಿನಗಳ ಕಾಲ ಅನ್ನಾಹಾರ ನೀಡದಿರುವುದು ತಿಳಿದುಬಂತು. ಅಲ್ಲದೆ ಮಗುವಿಗೆ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಕೋಜಿಕ್ಕೋಡು ಅಡಿಶನಲ್ ಸೆಶೆನ್ಸ್ ನ್ಯಾಯಾಲಯವು ಇಬ್ಬರನ್ನೂ ಖುಲಾಸೆಗೊಳಿಸಿತ್ತು. ಇದನ್ನು ರಾಜ್ಯ ಸರಕಾರ ಹೈಕೋರ್ಟಿನಲ್ಲಿ ಪ್ರಶ್ನಿಸಿ ಅಫೀಲು ಮಾಡಿತ್ತು. ಹೈಕೋರ್ಟ್ ಪ್ರಕರಣದ ವಾದ-ವಿವಾದದ ನಂತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದೆ

Post a Comment

0 Comments