ಮುಳ್ಳೇರಿಯ: ಹಳೆಯ ಬಟ್ಟೆ ಸಂಗ್ರಹಿಸುವ ವೇಳೆ ಬಟ್ಟೆಯ ಒಳಗೆ ಲಭಿಸಿದ 5000 ಸಾವಿರ ರೂ.ಗಳನ್ನು ಸಂಬಂಧಪಟ್ಟವರಿಗೆ ಹಿಂತಿರುಗಿಸಿ ಹರಿತ ಕರ್ಮ ಸೇನೆಯ ಸದಸ್ಯರು ಆದರ್ಶ ಮೆರೆದರು. ಕಾರಡ್ಕ ಗ್ರಾಮ ಪಂಚಾಯತಿನ 6 ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ. ಹರಿತ ಕರ್ಮ ಸೇನೆಯ ವರ್ಕರ್ ಗಳಾದ ತಾರಾ, ಮೀನಾಕ್ಷಿ ಕಡೆಂಗೋಡು ಅವರು ಪ್ಲಾಸ್ಟಿಕ್, ಬಟ್ಟೆ ಬರೆ ಸಂಗ್ರಹಿಸುವ ವೇಳೆ 5 ಸಾವಿರ ರೂ. ಲಭಿಸಿದೆ. ಮಲ್ಲಾವರದ ಆನಂದ ಭಟ್ ಅವರ ಮನೆಯಿಂದ ಪಡೆದ ಹಳೆಯ ಬಟ್ಟೆಯೊಳಗೆ ಹಣವಿತ್ತು. ಬಟ್ಟೆ ಬರೆಗಳನ್ನು ತಂದು ಸಂಗ್ರಹಣಾ ಕೇಂದ್ರದಲ್ಲಿ ಬಿಡಿಸಿದಾಗ ಹಣ ಗಮನಕ್ಕೆ ಬಂತು. ಕೂಡಲೇ ತಾರಾ ಹಾಗೂ ಮೀನಾಕ್ಷಿ ಅವರು ಆನಂದ ಭಟ್ ಅವರ ಮನೆಗೆ ಹೋಗಿ ಹಣ ಹಿಂತಿರುಗಿಸಿ ಆದರ್ಶ ಮೆರೆದಿದ್ದಾರೆ. ತಾರಾ ಹಾಗೂ ಮೀನಾಕ್ಷಿ ಅವರನ್ನು ಗ್ರಾಮ ಪಂಚಾಯತು ಅಧ್ಯಕ್ಷ ಅಡ್ವ. ಕೆ.ಗೋಪಾಲಕೃಷ್ಣ ಅವರು ಅಭಿನಂದಿಸಿದ್ದಾರೆ


0 Comments