Ticker

6/recent/ticker-posts

Ad Code

ಚೆರ್ಕಳದ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ; 20 ಮಂದಿಯ ಸೆರೆ, 55 ಸಾವಿರ ರೂ.ವಶ


 ಚೆರ್ಕಳ: ಚೆರ್ಕಳದ ಬಹು ಅಂತಸ್ತಿನ ಕಟ್ಟಡದಲ್ಲಿ ಜುಗಾರಿ ನಿರತರಾಗಿದ್ದ 20 ಮಂದಿಯನ್ನು ಬಂಧಿಸಲಾಗಿದೆ. ಆಟಕ್ಕೆ ಬಳಸಿದ 55 ಸಾವಿರ ರೂ.ಗಳನ್ನು ವಶಪಡಿಸಲಾಗಿದೆ. ಜುಗಾರಿ ದಂಧೆ ನಡೆಯಿತ್ತಿದೆಯೆಂಬ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ವಿದ್ಯಾನಗರ ಇನ್ಸ್ಪೆಕ್ಟರ್ ಕೆ.ಪಿ.ಶೈನ್ ಹಾಗೂ ಸಂಗಡಿಗರು ನಿನ್ನೆ (ಮಂಗಳವಾರ) ರಾತ್ರಿ 10.30 ಕ್ಕೆ ದಾಳಿ ನಡೆಸಿದ್ದರು.

ಕುಂಡಂಗುಯಿ ನಿವಾಸಿ ಮುಹಮ್ಮದ್ ಕುಞ(46), ಚೆರ್ಕಳದ ಅಬ್ದುಲ್ ಹಮೀದ್(42),  ಬೇಡಡ್ಕ ನಿವಾಸಿ ಅಬ್ದುಲ್ ಶುಕೂರ್(42),  ಕುಂಡಂಗುಯಿಯ ಇಬ್ರಾಹಿಂ, ಬಂಬ್ರಾಣದ ಎಚ್.ರುತಿಷ, ಕುಂಬಳೆ ಬದ್ರಿಯ ಹೌಸ್ ನಿವಾಸಿ ಅಬ್ದುಲ್ ಸಾದಿಕ್ (31), ಪನಯಲಾಲ್ ನಿವಾಸಿ ಇಲ್ಯಾಸ್ (45),  ಕುಂಡಂಗುಯಿ ಚೇಡಿಕುಂಡ್ ನಿವಾಸಿ ಮಜೀದ್(40),  ಬೇಕಲ ನಿವಾಸಿ ಪೈಸಲ್(53), ಮುಳಿಯಾರು ನಿವಾಸಿ ಫವಾಸ್(40), ಬಂಟ್ವಾಳ ನಿವಾಸಿ  ಸಮೀರ್(45), ಬಂಟ್ವಾಳ ಬಿ.ಸಿ.ರೋಡ್ ನಿವಾಸಿ ರಿಯಾಸ್ (45), ಅಡ್ಕತ್ತಬೈಲು ಅರ್ಜಾಲು ನಿವಾಸಿ ಅನಿಲ್ ಕುಮಾರ್(38), ಬಂದ್ಯೋಡು ಬಳಿಯ ಮುಸ್ತಫ(42),  ಬಾಗಲಕೋಟೆ ನಿವಾಸು ಚಿದಾನಂದ(42),  ರಾವಣೇಶ್ವರಂ ಬಳಿಯ ಶಂಶೀರ್ ಅಬ್ಬಾಸ್(40), ಮಂಗಳೂರು ನಿವಾಸಿ ಅಸೀಸ್(40)), ಪರಪ್ಪ ಪಚ್ಚೋಡಿಯ ಅಶ್ರಫ್(28),  ಮೊಯ್ದು(50), ಉಪ್ಪಳ ಕಂಚಿಕಟ್ಟ ಬಳಿಯ ಹುಸೈನಾರ್(58) ಬಂಧಿತರು.

Post a Comment

0 Comments