Ticker

6/recent/ticker-posts

Ad Code

ಬಾರಿಕ್ಕಾಡು ಪುದಿಯಪುರ ತರವಾಡಿನಲ್ಲಿ ತೆಯ್ಯಂಕೆಟ್ ಮಹೋತ್ಸವದ ಅಂಗವಾಗಿ ದೇವಪ್ರಶ್ನೆ ಚಿಂತನೆ, ಸಮಿತಿ ರೂಪೀಕರಣ ಡಿಸಂಬರ್ 7 ರಂದು, ಆಮಂತ್ರಣ ಪತ್ರಿಕೆ ಬಿಡುಗಡೆ


 ಕಾಸರಗೋಡು: ಪಾಡಿ ಶ್ರೀ ಪುಳ್ಳಿಕರಿಂಗಾಳಿ ಭಗವತೀ ಕ್ಷೇತ್ರ ವ್ಯಾಪ್ತಿಯ ಬಾರಿಕ್ಕಾಡು ಪ್ರಾದೇಶಿಕ ಸಮಿತಿಯಲ್ಲಿರುವ ಬಾರಿಕ್ಕಾಡು ಪುದಿಯಪುರ ತರವಾಡಿನಲ್ಲಿ ಶ್ರೀ ವಯನಾಟ್ಟು ಕುಲವನ್ ತೆಯ್ಯಂಕೆಟ್ಟು ಮಹೋತ್ಸವ 2026 ರಲ್ಲಿ ನಡೆಯಲಿರುವುದು. ಕಾರ್ಯಕ್ರಮದ ಯಶಸ್ವಿಗಾಗಿ ದೇವಪ್ರಶ್ನೆ ಚಿಂತನೆ ಹಾಗೂ ಮಹೋತ್ಸವ ಸಮಿತಿ ರೂಪೀಕರಣ ಸಭೆ ಡಿಸೆಂಬರ್ 7 ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ನಡೆಯಲಿರುವುದು. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಾರಿಕ್ಕಾಡು ಪುದಿಯಪುರ ತರವಾಡಿನಲ್ಲಿ ನಡೆಯಿತು. ಪಾಡಿ ಶ್ರೀ ಪುಳ್ಳಿಕರಿಂಗಾಳಿ ಭಗವತಿ ಕ್ಷೇತ್ರದ ಆಚಾರ ಸ್ಥಾನಿಕರು, ಭರಣ ಸಮಿತಿ‌ ಪದಾಧಿಕಾರಿಗಳು, ಬಾರಿಕ್ಕಾಡು ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು, ಪುದಿಯಪುರ ತರವಾಡು ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದರು

Post a Comment

0 Comments