Ticker

6/recent/ticker-posts

Ad Code

ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ಯಂ ಸುಬ್ರಹ್ಮಣ್ಯ ಭಟ್ ಅವರಿಗೆ ನುಡಿನಮನ


ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ಇತ್ತೀಚಿಗೆ ನಿಧನರಾದ ನಿವೃತ್ತ ಅಧ್ಯಾಪಕರೂ ಯಕ್ಷಗಾನ ಹಿರಿಯ ಶ್ರೇಷ್ಠ ಕಲಾವಿದರೂ ಶೈಕ್ಷಣಿಕ ಕ್ಷೇತ್ರದ ಸಕ್ರಿಯ ಕಾರ್ಯಕರ್ತರೂ ಮತ್ತು ಸಾಮಾಜಿಕ ಮುಂದಾಳುವೂ ಆಗಿದ್ದ   ಪರಯಂಗೋಡು ಯಂ ಸುಬ್ರಹ್ಮಣ್ಯ ಭಟ್ ಅವರಿಗೆ  ನುಡಿನಮನ ಕಾರ್ಯಕ್ರಮವು  26.10.2025ರಂದು  ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಜರಗಿತು. ಸುಬ್ರಹ್ಮಣ್ಯ ಭಟ್ ಅಡ್ಕ ಅಧ್ಯಕ್ಷತೆ ವಹಿಸಿ  ನುಡಿನಮನ ಮಾತುಗಳನ್ನಾಡಿದರು. 

ಸೀತಾರಾಮ ಬಳ್ಳುಳ್ಳಾಯ, ಮಹಾಲಿಂಗೇಶ್ವರ ಭಟ್ ಪೆರ್ನೆ, ವೆಂಕಟ ಭಟ್ ಎಡನೀರು, ಗೋವಿಂದ ಬಳ್ಳಮೂಲೆ , ಕೃಷ್ಣ ಭಟ್ ಅಡ್ಕ  ನುಡಿನಮನಗಳನ್ನು ಅರ್ಪಿಸಿದರು.

 ಹರಿಕೃಷ್ಣ ಪೆರಡಂಜಿ, ಹರಿಪ್ರಸಾದ್ ಕರಣಿ, ಕೃಷ್ಣಮೂರ್ತಿ. ಕೆ.ಆರ್ ಬೆಂಗಳೂರು, ಸರಸ್ವತಿ ಬಳ್ಳಮೂಲೆ, ಗಾಯತ್ರಿದೇವಿ, ರಾಜೇಶ್ವರಿ ಈಶ್ವರ ಭಟ್ ಬಳ್ಳಮೂಲೆ, ಹರಿಕೃಷ್ಣ ಭಟ್. ಎಂ.ಎಸ್, ಬಾಲಕೃಷ್ಣ ಚರವು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಖ್ಯಾತ ಭಾಗವತ ದಿವಂಗತ ದಿನೇಶ ಅಮ್ಮಣ್ಣಾಯ ಅವರಿಗೂ ನುಡಿ ನಮನ ಸಲ್ಲಿಸಲಾಯಿತು. 


ಮುರಳಿಕೃಷ್ಣ ಸ್ಕಂದ ಸ್ವಾಗತಿಸಿ ಡಾ //  ಶಿವಕುಮಾರ್ ಅಡ್ಕ  ನುಡಿನಮನ ಮಾತುಗಳನ್ನಾಡಿ ಧನ್ಯವಾದವಿತ್ತರು

Post a Comment

0 Comments