Ticker

6/recent/ticker-posts

Ad Code

ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದು 2 ಕೋಟಿ ರೂ , ಚಿನ್ನಾಭರಣ ಪಡೆದು ವಂಚನೆ; ಆರೋಪಿಯ ಸೆರೆ


 ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದು 2 ಕೋಟಿ ರೂ ಹಾಗೂ  ಚಿನ್ನಾಭರಣ ಪಡೆದು ವಂಚಿಸಿದ ಆರೋಪಿಯನ್ನು ಕೊಚ್ಚಿನ್ ಕಳಮಶೇರಿ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಕೊಳತ್ತೂರು ವರಿಕುಳಂ ನಿವಾಸಿ ಪ್ರದೀಪ್ ಕುಮಾರ್(45) ಬಂಧಿತ ಆರೋಪಿ. ಕೊಚ್ಚಿನ್ ಇಡಪ್ಪಳ್ಳಿಯಲ್ಲಿ ಪ್ರದೀಪ್ ಕುಮಾರ್ ಅವರ ಮಾಲಕತ್ವದಲ್ಲಿರುವ ಭುವನ್ ಶ್ರೀ ಇನ್ಫೋಟೆಕ್ ಅಂಡ್ ಮೇನ್ ಪವರ್ ಸೊಲ್ಯೂಶನ್  ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಸಂಸ್ಥೆಯ ಹೆಸರಿನಲ್ಲಿ ಈ ವಂಚನೆ ನಡೆದಿದೆ. 2022 ಅಗಸ್ಟ್ ತಿಂಗಳಿಂದ 2025 ಜುಲೈ ತಿಂಗಳ ವರೆಗಿನ ಕಾಲಾವಧಿಯಲ್ಲಿ ದೂರುದಾತೆಯಿಂದ ಈತ 1.98 ಕೋಟಿ ರೂ, 4.5 ಲಕ್ಷ ರೂ.ಗಳ ಚಿನ್ನಾಭರಣ ಪಡೆದಿದ್ದನು. 78 ಮಂದಿಯನ್ನು ವಿದೇಶಕ್ಕೆ ಕೊಂಡು ಹೋಗುವುದಾಗಿ ನಂಬಿಸಿ ಈ ಹಣ ಪಡೆಯಲಾಗಿತ್ತು. 2025 ರಲ್ಲಿ 15 ಪವನು ಚಿನ್ನಾಭರಣ ಪಡೆದಿದ್ದನು ಎಂದು ಮಹಿಳೆ ದೂರಿದ್ದರು. ಬಂಧಿತ ಆರೋಪಿ ಈ ಹಿಂದೆ ಪಾದೂರು ಕುಞಾಮು ಹಾಜಿ ಅವರ ಚಾಲಜನಾಗಿದ್ದು ಅನಂತರ ಕೆಲಸ ತೊರೆದಿದ್ದನು

Post a Comment

0 Comments