ತಿರುವನಂತಪುರಂ: ಈ ಹಿಂದೆ ಎರಡು ಸಲ ಜನಪ್ರತಿನಿಧಿಯಾದವರನ್ನು ಸ್ಥಳೀಯಾಡಳಿತೆ ಚುನಾವಣೆಯಲ್ಲಿ ಪನಃ ಪರಿಗಣಿಸದಿರಲು ಸಿಪಿಎಂ ನಿರ್ದರಿಸಿದೆ. ಹೊಸ ಜನಪ್ರತಿನಿಧಿಗಳನ್ನು ಸೃಷ್ಟಿಸುವ ಉದ್ದೇಶದಿಂದ ಈ ನಿರ್ದಾರ ಕೈಗೊಳ್ಳಲಾಗಿದೆ. ಈ ನಿರ್ದಾರದಲ್ಲಿ ಬದಲಾವಣೆ ಅಗತ್ಯವಿದ್ದರೆ ಜಿಲ್ಲಾ ಸಮಿತಿ, ರಾಜ್ಯ ಸಮಿತಿಗಳ ಅನುಮತಿ ಪಡೆಯಬೇಕು.ಲೋಕಲ್, ಏರಿಯ ಕಾರ್ಯದರ್ಶಿಗಳು ಸ್ಪರ್ದಿಸಬಾರದು ಎಂದು ಸಹ ನಿರ್ದರಿಸಲಾಗಿದೆ. ಲೋಕಲ್, ಏರಿಯ ಕಾರ್ಯದರ್ಶಿಗಳು ಸ್ಪರ್ದಿಸುವುದಿದ್ದಲ್ಲಿ ಮೇಲ್ ಸಮಿತಿಗಳ ಅನುಮತಿ ಪಡೆಯಬೇಕು ಹಾಗೂ ಕಾರ್ಯದರ್ಶಿ ಹುದ್ದೆ ತೊರೆದು ಬೇರೆಯವರನ್ನು ನೇಮಿಸಬೇಕು ಎಂದು ತಿಳಿಸಲಾಗಿದೆ.
ಸ್ಥಳೀಯಾಡಳಿತೆ ಚುನಾವಣೆಯಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲುವ ಮೂಲಕ ವಿಧಾನಸಭಾ ಚುನಾವಣೆಗೆ ಸಿದ್ದತೆ ನಡೆಸಲು ಸಿಪಿಎಂ ನಿರ್ದರಿಸಿದೆ.
 
 

 
 
 
 
 
 
 
 
 
 
 
 
 
 
 
 
 
 
 
 
0 Comments